Select Your Language

Notifications

webdunia
webdunia
webdunia
webdunia

ಮುಮ್ತಾಜ್ ಚಿತ್ರದಲ್ಲಿ ಅತಿಥಿ ಪಾತ್ರಧಾರಿಯಾಗಿ ನಟಿಸಲಿದ್ದಾರೆ ದರ್ಶನ್

ಮುಮ್ತಾಜ್ ಚಿತ್ರದಲ್ಲಿ ಅತಿಥಿ ಪಾತ್ರಧಾರಿಯಾಗಿ ನಟಿಸಲಿದ್ದಾರೆ ದರ್ಶನ್
, ಬುಧವಾರ, 25 ಮಾರ್ಚ್ 2015 (09:55 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಗ್ರಜ ಚಿತ್ರದಲ್ಲಿ ವಿಶೇಷ ಅತಿಥಿಯಾಗಿ ಕಂಡಿದ್ದರು. ಅಲ್ಲದೆ ಈ ಚಿತ್ರದ 25 ನೇ ದಿನದ ಪ್ರದರ್ಶನದ ಬಳಿಕ ತಾನು ಪಬ್ಲಿಸಿಟಿಗೆ ಬರುವುದಾಗಿ ಸಹಿತ ಚಿತ್ರತಂಡಕ್ಕೆ ಆಶ್ವಾಸನೆ ನೀಡಿದ್ದರು. ಆದರೆ ಹಾಗೆ ಆಗಲಿಲ್ಲ ಅದು ಬೇರೆ ಸಂಗತಿ ಈಗ ತಿಳಿದು ಬಂದ ಸಂಗತಿ ಏನೆಂದರೆ ಧರ್ಮ ಕೀರ್ತಿ ರಾಜ್ ಮತ್ತು ಶರ್ಮಿಳ ಮಾಂಡ್ರೆ ಅವರ ಅಭಿನಯದ ಮುಮ್ತಾಜ್ ಚಿತ್ರದಲ್ಲಿ ಅತಿಥಿ ಪಾತ್ರಧಾರಿ ಆಗಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಪ್ರಮೋಶನ್ ಕಾರ್ಯಕ್ರಮಗಳಲ್ಲಿ ದರ್ಶನ್ ಅವರು ಭಾವಹಿಸುತ್ತಾರಾ ? ಅಥವಾ ಇಲ್ಲವೇ ಎನ್ನುವುದು ಕಾಲವೇ ತಿಳಿಸುತ್ತದೆ. ಧರ್ಮ ಕೀರ್ತಿ ರಾಜ್  ಅವರು ದರ್ಶನ್‌ರ ಅತಿ ಆಪ್ತವಲಯಕ್ಕೆ ಸೇರಿದ ಸ್ನೇಹಿತ. 
ಹಿರಿಯ ಖಳನಟ ಕೀರ್ತಿರಾಜ್ ಅವರ ಪುತ್ರ ಧರ್ಮ. ಈ ಎಲ್ಲ ಸಂಗತಿಗಳನ್ನು ಮುಂದೆ ಇಟ್ಟು ದರ್ಶನ್ ಅತಿ ಹೆಚ್ಚು ಸಮಯ ಈ ಚಿತ್ರಕ್ಕೆಂದು ಮೀಸಲಿಡುವ ಸಾಧ್ಯತೆ ಇದೆ. ದರ್ಶನ್ ಆಕ್ಷನ್ ದೃಶ್ಯಗಳಲ್ಲಿ ಇರುವಂತಹ ಅನೇಕ ಚಿತ್ರಗಳು ಈಗ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. 
 
ದರ್ಶನ್ ಈ ಚಿತ್ರದಲ್ಲಿ ಡಾನ್ ಪಾತ್ರಧಾರಿ ಆಗಿದ್ದು, ಪ್ರೇಮಿಗಳನ್ನು ಒಟ್ಟು ಮಾಡುವ ಒಳ್ಳೆಯ ಮನದವರಾಗಿರುತ್ತಾರಂತೆ. ಈ ಚಿತ್ರದ ಶೂಟಿಂಗ್ ಈಗ 55 ದಿನಗಳ ನಡೆಯಲಿದ್ದು, ಅದು ಮೈಸೂರು, ಬೆಂಗಳೂರು, ಕೆಜಿಎಫ್, ಬಲಮುರಿ, ಆಗ್ರದಲ್ಲೂ ಸಹಿತ ನೆರವೇರಲಿದೆ. ಆಕ್ಷನ್ ಕಟ್ ಕೆ ಎನ್ ಕೃಷ್ಣಮೂರ್ತಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣ್ ಸಂಗೀತ ಚಿತ್ರಕ್ಕಿದೆ. 

Share this Story:

Follow Webdunia kannada