Webdunia - Bharat's app for daily news and videos

Install App

ಪವಿತ್ರಾ ಗೌಡ ಜೊತೆ 10 ವರ್ಷದಿಂದ ಸಂಬಂಧ: ಚಾರ್ಜ್ ಶೀಟ್ ನಲ್ಲಿ ದರ್ಶನ್ ತಪ್ಪೊಪ್ಪಿಗೆಯಲ್ಲಿ ಏನಿದೆ

Krishnaveni K
ಸೋಮವಾರ, 9 ಸೆಪ್ಟಂಬರ್ 2024 (14:56 IST)
ಬೆಂಗಳೂರು: ಪವಿತ್ರಾ ಗೌಡ ಜೊತೆ ನನಗೆ 10 ವರ್ಷಗಳಿಂದ ಪರಿಚಯವಿದೆ. ನಾವಿಬ್ಬರೂ ಲಿವ್ ಇನ್ ಸಂಬಂಧದಲ್ಲಿದ್ದೆವು ಎಂಬುದನ್ನು ಸ್ವತಃ ದರ್ಶನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವುದನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಇದರ ವಿವರ ಇಲ್ಲಿದೆ.

ಪೊಲೀಸರ ವಿಚಾರಣೆ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಲ್ಲಿ ಇಬ್ಬರೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ತಮ್ಮಿಬ್ಬರ ನಡುವಿನ ಸಂಬಂಧವನ್ನೂ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಚಾರ್ಜ್ ಶೀಟ್ ನಲ್ಲಿ ಕೃತ್ಯದ ಪಿನ್ ಟು ಪಿನ್ ವಿವರಗಳು ಇವೆ. ಇದರ ಜೊತೆಗೆ ಸಾಕ್ಷಿಗಳು, ಆರೋಪಿಗಳ ಸ್ವ ಇಚ್ಛಾ ಹೇಳಿಕೆಗಳನ್ನು ದಾಖಲಿಸಲಾಗಿದೆ. ಇದರಲ್ಲಿ ದರ್ಶನ್ ತಪ್ಪೊಪ್ಪಿಕೊಂಡಿರುವ ಹೇಳಿಕೆಯೂ ಇದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವುದು ನಿಜ. ‘ನಾನು ಮತ್ತು ಪವಿತ್ರಾ ಗೌಡ ಜೊತೆ 10 ವರ್ಷಗಳಿಂದ ಪರಿಚಯವಿದ್ದು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದೇನೆ. ಪವನ್ ನಮ್ಮ ಮನೆ ಮತ್ತು ಪವಿತ್ರಾ ಮನೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ…’ ಎಂದು ದರ್ಶನ್ ಆರೋಪಿಗಳ ಜೊತೆಗಿನ ತಮ್ಮ ಸಂಬಂಧ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ.  ಇತ್ತ ಪವಿತ್ರಾ ಗೌಡ ಕೂಡಾ ‘ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಪಕ್ಕವೇ ಕುಳಿತು ಪಟ್ಟಣಗೆರೆ ಶೆಡ್ ಗೆ ಹೋಗಿದ್ದೆ. ಕಾರಿನಲ್ಲಿ ನಾಲ್ವರು ಇದ್ದರು. ರೇಣುಕಾಸ್ವಾಮಿಗೆ ಬುದ್ದಿ ಕಲಿಸೋಣ ಬಾ ಎಂದು ನನ್ನನ್ನು ಕರೆದಿದ್ದರು’ ಎಂದಿದ್ದಾರೆ.

ಅಷ್ಟೇ ಅಲ್ಲದೆ, ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧ ಏನು ಎಂದು ಸ್ಪಷ್ಟಪಡಿಸುವುದಕ್ಕೆ ಇಬ್ಬರ ಫೋಟೋಗಳನ್ನೂ ಚಾರ್ಜ್ ಶೀಟ್ ನಲ್ಲಿ ನೀಡಲಾಗಿದೆ. ಅಲ್ಲದೆ, ಪವಿತ್ರಾ ಗೌಡ ಪಟ್ಟಣಗೆರೆ ಶೆಡ್ ಗೆ ಹೋಗಲು ಮನೆಯಿಂದ ಹೊರಟ ದೃಶ್ಯವನ್ನೂ ಲಗತ್ತಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments