ಹುಲಿಯನ್ನು ದತ್ತು ಪಡೆದುಕೊಂಡ ನಟ ದರ್ಶನ್

Webdunia
ಸೋಮವಾರ, 27 ಜೂನ್ 2016 (09:37 IST)
ನಟ ದರ್ಶನ್ ಅವರಿಗೆ ಪ್ರಾಣಿಗಳು ಅಂದ್ರೆ ಎಷ್ಟು ಪ್ರೀತಿ ಅವನ್ನೋದು ಎಲ್ಲರಿಗೂ ಗೊತ್ತೇ ಇದೆ. ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಇನ್ನು ಆಗಾಗ್ಗೆ ವಿದೇಶಿ ಪಕ್ಷಿಗಳನ್ನು ಇಲ್ಲಾ ಇನ್ನ್ಯಾವುದೋ ಪ್ರಾಣಿಯನ್ನು ತಂದು ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಸಲಹುತ್ತಾರೆ. ಅಲ್ಲದೇ ಮೈಸೂರು ಮೃಗಾಲಯದಲ್ಲೂ ಅವರು ಈ ಹಿಂದೆ ಆನೆಯೊಂದನ್ನು ದತ್ತು ಪಡೆದಿದ್ದರು.

 
ಇದೀಗ ದರ್ಶನ್ ಅವರು ಮತ್ತೊಂದು ಪ್ರಾಣಿಯನ್ನು ದತ್ತುಪಡೆದಿದ್ದಾರೆ. ಕಳೆದ ವರ್ಷ ಆನೆ ಮರಿಯೊಂದನ್ನು ದತ್ತು ಪಡೆದಿದ್ದ ದರ್ಶನ್ ಈ ಬಾರಿಯ ಮೃಗಾಲಯದ ಹುಲಿಯೊಂದನ್ನು ದತ್ತು ಪಡೆದಿದ್ದಾರೆ.ಅಲ್ಲದೇ ಆನೆ ಹಾಗೂ ಹುಲಿಯನ್ನು ದತ್ತು ಪಡೆದುಕೊಂಡಿರುವ ಬಗ್ಗೆ ಮೃಗಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿರುವ ದರ್ಶನ್ ಅವರು ಇನ್ಮೇಲೆ ಈ ಎರಡು ಪ್ರಾಣಿಗಳ ಸಂಪೂರ್ಣ ಜವಬ್ದಾರಿಯನ್ನು ತಾವೇ ವಹಿಸಿಕೊಳ್ಳಲಿದ್ದಾರೆ. ದರ್ಶನ್ ಅವರ ಪ್ರಾಣಿ ಪ್ರೇಮ ಎಷ್ಟಿದೆ ಅನ್ನೋದಕ್ಕೆ ಅವರೀಗ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿರೋದೇ ಸಾಕ್ಷಿ.
 
ಇನ್ನು ಮೊನ್ನೆ ಮೊನ್ನೆ ತಾನೇ ದರ್ಶನ್ ಅವರು ಫಾರ್ಮ್ ಹೌಸ್ ನಲ್ಲಿರುವ ತಮ್ಮ ಎರಡು ಎತ್ತುಗಳಿಗೆ ಛಾಲೆಂಜಿಂಗ್ ಸ್ಟಾರ್  ದರ್ಶನ್ ಹಾಗೂ ಟಾಕಿಂಗ್ ಸ್ಟಾರ್ ಸೃಜನ್ ಅಂತಾ ನಾಮಕರಣ ಮಾಡಿದ್ದರು. ದರ್ಶನ್ ಅವರು ತಮ್ಮ ಶೂಟಿಂಗ್ ನಿಂದ ಫ್ರೀಯಾಗಿದ್ದಾಗ ಹೆಚ್ಚಾಗಿ ಫಾರ್ಮ್ ಹೌಸ್ ನಲ್ಲಿ ಪ್ರಾಣಿ ಪಕ್ಷಿಗಳೊಂದಿಗೆ ಸಮಯ ಕಳೆಯುತ್ತಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಜಾಗಕ್ಕಾಗಿ ಕಿರಿಕ್ ಮಾಡಿದ ಯಶ್ ತಾಯಿ ಪುಷ್ಪಾ, ಹಾಸನದಲ್ಲಿ ಆಗಿದ್ದಾದರು ಏನು

ಬಿಗ್‌ಬಾಸ್‌ ವಿನ್ನರ್‌ ಹನುಮಂತು ಬಾಳಿಗೆ ಬೆಳಕಾದ ಸಿ.ಜೆ.ರಾಯ್: ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿದ್ದೇನು

ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ಪ್ರಕಾಶ್ ರಾಜ್ ಡಿಮ್ಯಾಂಡ್‌, ಚಲನಚಿತ್ರೋತ್ಸವದಲ್ಲಿ ಮೊದಲ ದಿನವೇ ವಿವಾದ

ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ವಾರಣಾಸಿ ಸಿನಿಮಾ ಬಿಡುಗಡೆ ಡೇಟ್ ಔಟ್

ನಟ ರಣವೀರ್ ಸಿಂಗ್ ಸೂಪರ್ ಹಿಟ್ ಸಿನಿಮಾ ಧುರಂಧರ್‌ ಇನ್ಮುಂದೆ ನೆಟ್‌ಫ್ಲಿಕ್ಸ್‌ನಲ್ಲಿ

ಮುಂದಿನ ಸುದ್ದಿ
Show comments