Select Your Language

Notifications

webdunia
webdunia
webdunia
webdunia

ತೆರೆ ಮೇಲೆ ಬರೋದಕ್ಕೆ ರೆಡಿಯಾಗುತ್ತಿದ್ದಾನೆ ಕ್ರೇಜಿ ಬಾಯ್

ತೆರೆ ಮೇಲೆ ಬರೋದಕ್ಕೆ ರೆಡಿಯಾಗುತ್ತಿದ್ದಾನೆ ಕ್ರೇಜಿ ಬಾಯ್
, ಸೋಮವಾರ, 3 ಆಗಸ್ಟ್ 2015 (10:19 IST)
ಮಹೇಶ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಶ್ಕ್ಷಿತ ಸಿನಿಮಾ ಕ್ರೇಜಿ ಬಾಯ್. ಹೊಸ  ಪ್ರತಿಭೆಗಳನ್ನು ಇಟ್ಟುಕೊಂಡು ಮಾಡುತ್ತಿರುವ ಈ ಸಿನಿಮಾದ ಹಾಡುಗಳ ಚಿತ್ರೀಕರಣಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಬೆಂಗಳೂರಿನ ಸುತ್ತಮುತ್ತ ಹಾಡುಗಳ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.
ಈ ಸಿನಿಮಾದಲ್ಲಿ ದಿಲೀಪ್ ನಾಯಕಾನಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಆಸಿಕಾ ಕಾಣಿಸಿಕೊಂಡಿದ್ದಾರೆ. ಜೆಸ್ ಗಿಫ್ಟ್ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಹಾಡುಗಳಿಗೆ ನೃತ್ಯ ಸಂಯೋಜಿಸುವ ಹೊಣೆಯನ್ನು ಹರ್ಷ ಹೊತ್ತು ಕೊಂಡಿದ್ದಾರೆ.
 
ಎರಡು ವರ್ಷಗಳ ನಂತ್ರ ಮಹೇಶ್ ಬಾಬು ನಿರ್ದೇಶಿಸುತ್ತಿರುವ ಕ್ರೇಜಿಬಾಯ್ ಸಿನಿಮಾದ ಶೂಟಿಂಗ್ ಅನ್ನು ಅತ್ಯಂತ ಬೇಗ ಮುಗಿಸುವ ಪ್ಲಾನ್ ನಲ್ಲಿದ್ದಾರೆ ಬಾಬು. ಒಟ್ಟಿನಲ್ಲಿ ಎಲ್ಲಾ ಅಂದುಕೊಂಡಂತೆ ಆದ್ರೆ ಕ್ರೇಜಿಬಾಯ್ ಅಕ್ಟೋಬರ್ ನಲ್ಲಿ ಪ್ರೇಕ್ಷಕರ ಎದುರುಗೆ ಬರಲಿದೆ.

Share this Story:

Follow Webdunia kannada