Webdunia - Bharat's app for daily news and videos

Install App

ಬಿಗ್‌ಬಾಸ್‌ ಆರಂಭಕ್ಕೆ ದಿನಗಣನೆ: ದೊಡ್ಮನೆಗೆ ಎಂಟ್ರಿಯಾಗಲಿರುವ ತೇಜಸ್ವಿನಿ ಗೌಡ, ಯಶ್ಮಿ ಗೌಡ

Sampriya
ಬುಧವಾರ, 14 ಆಗಸ್ಟ್ 2024 (15:13 IST)
Photo Courtesy X
ಹೈದರಾಬಾದ್‌: ತೆಲುಗಿನ ಸ್ಟಾರ್ ಮಾ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ ಹೊಸ ಪ್ರೋಮೊ ಈಚೆಗೆ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಶೋಗೆ ಸ್ಪರ್ಧಿಗಳು ಯಾರೆಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ.

ಈ ಬಾರಿಯ ಆವೃತ್ತಿಯಲ್ಲಿ ಕನ್ನಡದ ನಟಿಯರು ಕೂಡ ಈ ಬಾರಿ ಇರಲಿದ್ದಾರೆ. ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ.  ಅದರಲ್ಲಿ ನಟ, ನಟಿಯರು, ಯೂಟ್ಯೂಬರ್‌, ಸುದ್ದಿ ವಾಚಕಿ, ಕೃಷಿಕ, ಗಾಯಕರು, ನಿರೂಪಕರು ಮತ್ತು ಜ್ಯೋತಿಷಿಗಳು ಇದ್ದಾರೆ ಎಂದು ವರದಿಯಾಗಿದೆ.

ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಬರೆಲ್ಲಕ್ಕ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಯಶ್ಮಿ ಗೌಡ, ತೇಜಸ್ವಿನಿ ಗೌಡ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ಕಿರಾಕ್ ಆರ್‌ಪಿ, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಸಂಭವ್ಯರ ಹೆಸರು ಚಾಲ್ತಿಯಲ್ಲಿದೆ.

ನಟಿ ರೇಖಾ ಬೋಜ್, ಸಾವಯವ ಕೃಷಿ ತಜ್ಞ ನೇತ್ರಾ ರೆಡ್ಡಿ, ಸುದ್ದಿ ವಾಚಕಿ ಕಲ್ಯಾಣಿ,ಧಾರಾವಾಹಿ ನಟ ಇಂದ್ರನೀಲ್ ಸೇನ್‌ಗುಪ್ತ, ನಟ ಅಬ್ಬಾಸ್, ನಟ ರೋಹಿತ್, ಗಾಯಕ ಸಾಕೇತ್ ಕೊಮಂದೂರಿ, ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2023 ರ ಊರ್ಮಿಳಾ ಚೌಹಾಣ್ ಅವರ ಹೆಸರು ಕೂಡ ಇದೆ.

ಇದರಲ್ಲಿ ಯಶ್ಮಿ ಗೌಡ ಕರ್ನಾಟಕದವರು. ಇದರ ಜೊತೆಗೆ ತೇಜಸ್ವಿನಿ ಗೌಡ ಕೂಡ ಕನ್ನಡದವರೇ ಆಗಿದ್ದಾರೆ. ಇವರು ಈಗ ತೆಲುಗಿನ ಧಾರಾವಾಹಿಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿಯಾದರೆ ಕನ್ನಡಿಗರ ಬೆಂಬಲ ಪಡೆಯಲಿದ್ದಾರೆ ಎನ್ನಲಾಗಿದೆ.

ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ಆವೃತ್ತಿ ಸೆಪ್ಟೆಂಬರ್ 8 ರ ಭಾನುವಾರ ಸಂಜೆ 6 ರಿಂದ ಪ್ರಾರಂಭವಾಗಲಿದೆ. ನಂದಮೂರಿ ಕುಟುಂಬದಿಂದ ತೆಲುಗು ಸಿನೆಮಾ ರಂಗಕ್ಕೆ ನಾಯಕನಾಗಿ ಕಾಲಿಟ್ಟಿರುವ ಚೈತನ್ಯ ಕೃಷ್ಣ ಅವರು ಬಿಗ್‌ಬಾಸ್‌ ಗೆ ಬರಲಿದ್ದಾರೆ ಎನ್ನಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ಮುಂದಿನ ಸುದ್ದಿ
Show comments