Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸೀಸನ್-9 ಸಂಭಾವ್ಯರ ಪಟ್ಟಿ ರಿಲೀಸ್

ಬಿಗ್ ಬಾಸ್ ಸೀಸನ್-9 ಸಂಭಾವ್ಯರ ಪಟ್ಟಿ ರಿಲೀಸ್
, ಬುಧವಾರ, 30 ಸೆಪ್ಟಂಬರ್ 2015 (10:24 IST)
ಬಿಗ್ ಬಾಸ್ ಸೀಸನ್ -9 ನಲ್ಲಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಅಂತಾ ಬಹಳ ದಿನಗಳಿಂದಲೇ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳಲ್ಲೂ ಕಾರ್ಯಕ್ರಮದ ಸ್ಪರ್ಧಿಗಳು ಯಾರಿರಬಹುದು ಎಂಬ ಪ್ರಶ್ನೆ ಕಾಡುತ್ತಲೇ ಇದೆ. ಆದ್ರೀಗ ಆ ಪ್ರಶ್ನೆಗೆ ತಕ್ಕ ಮಟ್ಟಿಗೆ ಉತ್ತರ ಸಿಕ್ಕಿದೆ.
ಬಿಗ್ ಬಾಸ್ ಸೀಸನ್-9ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ  ವಿವಾದಿತ ವ್ಯಕ್ತಿಗಳೇ ಹೆಚಾಚಗಿದ್ದಾರೆ. ಪೂನಂ ಪಾಂಡೆ, ಶ್ವೇತಾ ತಿವಾರಿ, ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ, ಶ್ವೇತಾ ಬಸು, ರಾಹುಲ್ ಯಾದವ್ ಮುಂತಾದವರ ಹೆಸರು ಈಗಾಗಲೇ ಹೊರ ಬಿದ್ದಿದೆ. ಇದರ ಜೊತೆಗೆ ಬಿಗ್ ಬಾಸ್ ಮನೆಯ ನಿರ್ಮಾಣ ಹಂತದ ಚಿತ್ರಗಳು ಕೂಡ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
 
ಇನ್ನು ಬಿಗ್ ಬಾಸ್ ಮನೆಲೆ  ಈ ಬಾರಿ ಶಾರುಖ್ ಹಾಗೂ ಐಶ್ವರ್ಯಾ ರೈ ಕೂಡ ಭೇಟಿ ಕೊಡಲಿದ್ದಾರೆ. ಐಶ್ ತಮ್ಮ ಜಝ್ಬಾ ಸಿನಿಮಾದ ಪ್ರಮೋಷನ್ ಗಾಗಿ ಹಾಗೂ ಕಿಂಗ್ ಖಾನ್ ತಮ್ಮ ದಿಲ್ ವಾಲೇ ಸಿನಿಮಾದ ಪ್ರಚಾರಕ್ಕಾಗಿ ಬಿಗ್ ಬಾಸ್ ಮನೆಯ ಒಳ ಹೊಕ್ಕಲಿದ್ದಾರೆ.
 

Share this Story:

Follow Webdunia kannada