Select Your Language

Notifications

webdunia
webdunia
webdunia
webdunia

ಚಿತ್ರ ಸಾಹಿತಿಯಾದ ಹಾಸ್ಯನಟ ಚಿಕ್ಕಣ್ಣ

ಚಿತ್ರ ಸಾಹಿತಿಯಾದ ಹಾಸ್ಯನಟ ಚಿಕ್ಕಣ್ಣ
, ಗುರುವಾರ, 2 ಜುಲೈ 2015 (10:04 IST)
ಚಿಕ್ಕಣ್ಣ. ಕನ್ನಡ ಸಿನಿಮಾರಂಗದಲ್ಲಿ ಸದ್ಯ ಇರುವ ಹೆಸರಾಂತ ಹಾಸ್ಯ ನಟರಲ್ಲಿ ಇವರೂ ಒಬ್ಬರು. ಈಗಾಗಲೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಚಿಕ್ಕಣ್ಣ, ತಮ್ಮ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಇಷ್ಟು ದಿನ ಹಾಸ್ಯ ನಟರಾಗಿ ಕಾಣಿಸಿಕೊಂಡಿದ್ದ ಚಿಕ್ಕಣ್ಣ ಇದೀಗ ಗೀತ ರಚನಾಕಾರನಾಗಿ ತಮ್ಮ ಜೀವನದ ಮತ್ತೊಂದು ಮಜಲು ಪ್ರವೇಶಿಸಿದ್ದಾರೆ.
ಹಾಸ್ಯಕ್ಕೂ ಸೈ , ನಾಯಕನ ಪಾತ್ರಕ್ಕೂ ಜೈ ಎನ್ನುತ್ತಿದ್ದ ಚಿಕ್ಕಣ್ಣ ಇದೀಗ ಹಾಡು ಬರೆಯೋದರಲ್ಲಿ ತಾನು ಪಂಟ ಅನ್ನೋದನ್ನು ತೋರಿಸಿದ್ದಾರೆ. ಗೌಸ್ ಪೀರ್ ಅವರ ಶಾರ್ಪ್ ಶೂಟರ್ ಅನ್ನೋ ಸಿನಿಮಾಗೆ ಚಿಕ್ಕಣ್ಣ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದು ಸಿನಿಮಾಕ್ಕೆ ಹಾಡೊಂದನ್ನು ಬರೆಯುವುದರ ಮೂಲಕ. ಇದೇ ಮೊದಲ ಬಾರಿಗೆ ನಾನು ಹಾಡು ಬರೆದಿದ್ದೇನೆ ಎಂದಿರುವ ಚಿಕ್ಕಣ್ಣ ಹಾಡಿನಲ್ಲಿ ತನಗೆ ತೋಚಿದ್ದನ್ನೆಲ್ಲಾ ಬರೆದಿದ್ದೇನೆ ಎಂದಿದ್ದಾರೆ.  ಇನ್ನು ಹಾಡು ಹಾಸ್ಯ ಪ್ರಧಾನವಾಗಿದ್ದರಿಂದ ನನಗೆ ಹಾಡು ಬರೆಯೋದು ಸುಲಭವಾಯ್ತು ಅಂತಾ ಚಿಕ್ಕಣ್ಣ ಹೇಳಿದ್ದಾರೆ.
 
ಇನ್ನು ಈ ಹಾಡನ್ನು ಪುಟಾಣಿ ಮಕ್ಕಳು ಕೂಡ ಹಾಡಬಹುದಂತೆ. ಅಲ್ಲದೇ ಈ ಹಾಡನ್ನು ಬರೆಯೋದಕ್ಕೆ ಮಿಸ್ಟರ್ ಚಿಕ್ಕಣ್ಣ 9 ಗಂಟೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಹಾಡಿಗೆ ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಗಿದೆಯಂತೆ. ಇನ್ನು ಈ ಸಿನಿಮಾದ ಆಡಿಯೋ ಇದೇ ತಿಂಗಳು ಬಿಡುಗಡೆಯಾಗಲಿದ್ದು, ಆಗಸ್ಟ್ ನಲ್ಲಿ ಸಿನಿಮಾ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿದೆಯಂತೆ.

Share this Story:

Follow Webdunia kannada