Select Your Language

Notifications

webdunia
webdunia
webdunia
webdunia

ಮೊದಲೇ ಹುಟ್ಟುಹಬ್ಬ ಆಚರಿಸಿಕೊಂಡ ಸಿನಿಮಾ

ಮೊದಲೇ ಹುಟ್ಟುಹಬ್ಬ ಆಚರಿಸಿಕೊಂಡ ಸಿನಿಮಾ
, ಮಂಗಳವಾರ, 1 ಸೆಪ್ಟಂಬರ್ 2015 (09:34 IST)
ಕಿಚ್ಚ ಸುದೀಪ್ ನಾಳೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಆದ್ರೆ ನಾಳೆ ಬರ್ತಡೇ ಆಚರಿಸಿಕೊಳ್ಳಲಿರುವ ಕಿಚ್ಚ ಎರಡು ದಿನ ಮೊದಲೇ ತಮ್ಮ ಹುಟ್ಟಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಸುದೀಪ್ ಕೆ.ಎಸ್. ರವಿಕುಮಾರ್ ನಿರ್ದೇಶಿಸುತ್ತಿರುವ ಕೋಟಿಗೊಬ್ಬ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಸೆಟ್ ನಲ್ಲೇ ಭಾನುವಾರ ಚಿತ್ರತಂಡ ಸುದೀಪ್ ಅವರಿಗೆ ಸರ್'ಪ್ರೈಸ್ ನೀಡಿದೆ. ಸೆಟ್'ನಲ್ಲಿ ಸುದೀಪ್ ಅವರ ಹುಟ್ಟುಹಬ್ಬ ಆಚರಿಸಲಾಯಿತು.                                                                              
ಸುದೀಪ್ ಅವರು ಮುಂಬರುವ ಕರ್ನಾಟಕ ಕ್ರಿಕೆಟ್ ಲೀಗ್'ನಲ್ಲಿ ಬ್ಯುಸಿ ಆಗುವುದರಿಂದ ಚಿತ್ರದ ಚಿತ್ರೀಕರಣ ಸದ್ಯಕ್ಕೆ ನಿಂತಿದೆ. ಪಂದ್ಯಾವಳಿ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭವಾಗುತ್ತದೆ. ಹಾಗಾಗಿ ಮೊದಲೇ ಹುಟ್ಟಹಬ್ಬವನ್ನು ಚಿತ್ರ ತಂಡ ಆಚರಿಸಿತು.                          
 
ಕಿಚ್ಚ ಅಭಿನಯಿಸುತ್ತಿರುವ  ಈ ಚಿತ್ರಕ್ಕೆ 'ಕೋಟಿಗೊಬ್ಬ-2' ಎಂದು ಹೆಸರಿಟ್ಟಿರುವ ಸುದ್ದಿ ಎಲ್ಲೆಡೆ ಕೇಳಿಬರುತ್ತಿದ್ದರೂ ಚಿತ್ರತಂಡ ಈ ಹೆಸರನ್ನು ಫೈನಲ್ ಮಾಡಿಲ್ಲ. ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ನಿರ್ದೇಶಕ ಕೆ.ಎಸ್. ರವಿಕುಮಾರ್, ನಟಿ ನಿತ್ಯಾ ಮೆನನ್ ಮುಂತಾದವರು ಪಾಲ್ಗೊಂಡಿದ್ದರು.

Share this Story:

Follow Webdunia kannada