Webdunia - Bharat's app for daily news and videos

Install App

ಕೋಲಾರ ಸಿನಿಮಾದಲ್ಲಿ ಬಾಲ ಗಾನ ಸುಧೆ

Webdunia
ಮಂಗಳವಾರ, 6 ಅಕ್ಟೋಬರ್ 2015 (11:02 IST)
ಸದ್ಯ ಲೂಸ ಮಾದ ಯೋಗೀಶ್ ನಟಿಸುತ್ತಿರುವ ಸಿನಿಮಾ ಕೋಲಾರ. ರೌಡಿಸಂ ಕಥ ಹಂದರವಿರುವ ಈ ಸಿನಿಮಾದ ಶೂಟಿಂಗ್ ಇದೀಗ ಕೊನೆಯ ಹಂತ ತಲುಪಿದೆ. ಮೊನ್ನೆ ಮೊನ್ನೆಯಷ್ಟೇ ಸಿನಿಮಾದ ಟಪ್ಪಾಂಗುಚ್ಚಿ ಸಾಗಂ ನ ಶೂಟಿಂಗ್ ನಡೀತು.
ವಿಶೇಷ ಅಂದ್ರೆ ಈ ಟಪ್ಪಾಂಗುಚ್ಚಿ ಹಾಡಿನಲ್ಲಿ ಕಾಲಿವುಡ್ ಖ್ಯಾತ ಗಾಯಕ ಗಾನಬಾಲ ನಟಿಸಿದ್ದಾರೆ. ಇನ್ನು ಈ ಹಾಡನ್ನು ಸ್ವತಃ ಗಾನಬಾಲ ಅವರೇ ಹಾಡಿದ್ದಾರೆ. ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಗಾನಬಾಲ ಸಂತಸ ವ್ಯಕ್ತಪಡಿಸಿದ್ದಾರೆ. ಆರ್ಯ ಎಂ ಮಹೇಶ್ ನಿರ್ದೇಶನದ ಈ ಸಿನಿಮಾದಲ್ಲಿ ಯೋಗೀಶ್ ಢಿಪರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
 
ಈ ಸಿನಿಮಾ ಕೋಲಾರದ ಕೆಜಿಎಫ್ ನ ರೌಡಿ ತಂಗನ ಕುರಿತಾದ ಸಿನಿಮಾವಂತೆ. ತಮಿಳು ಹಿನ್ನೆಲೆಯುಳ್ಳ ಈ ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣವಿದೆ. ಇನ್ನು ಸಿನಿಮಾದಲ್ಲಿ ತಮಿಳು ಹಿನ್ನೆಲೆಯವರೇ ಹಾಡಿದ್ರೆ ಉತ್ತಮ ಅನ್ನೋ ಕಾರಣಕ್ಕೆ ಸಿನಿಮಾದಲ್ಲಿ ಗಾನ ಬಾಲ ಅವರಿಂದ ಹಾಡಿಸಲಾಗಿದೆಯಂತೆ. ಈಗಗಾಲೇ ಈ ಸಿನಿಮಾ ನಾನಾ ಕಾರಣಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಅತೀ ಶೀಘ್ರದಲ್ಲಿ ಪ್ರೇಕ್ಷಕರೆದುರಿಗೆ ಬರಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments