Webdunia - Bharat's app for daily news and videos

Install App

ಮಾಸ್ತಿಗುಡಿ ದುರಂತ: 6 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

Webdunia
ಗುರುವಾರ, 27 ಏಪ್ರಿಲ್ 2017 (15:33 IST)
ಮಾಸ್ತಿಗುಡಿ ಚಿತ್ರದ  ಚಿತ್ರೀಕರಣದ ವೇಳೆ ನಡೆದಿದ್ದ ದುರಂತ ಪ್ರಕರಣಕ್ಕೆ ಸಂಬಂದಿಸಿದಂತೆ ರಾಮನಗರ ಜಿಲ್ಲೆಯ ಮಾಗಡಿ ಕೋರ್ಟ್`ಗೆ ಪೊಲೀಸರು 400 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ.  

ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ದು, ಸಾಹಸ ನಿರ್ದೇಶಕ ರವಿವರ್ಮಾ, ಯೂನಿಟ್ ಮ್ಯಾನೇಜರ್ ಪ್ರಕಾಶ್ ಬಿರಾದಾರ್ ಸೇರಿ 6 ಮಂದಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಚಾರ್ಜ್ ಶೀಟ್`ನಲ್ಲಿ 70 ಸಾಕ್ಷ್ಯಗಳನ್ನ ಉಲ್ಲೇಖಿಸಲಾಗಿದೆ. ಇನ್ಸ್`ಪೆಕ್ಟರ್ ಅನಿಲ್ ಕುಮಾರ್ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ನವೆಂಬರ್ 7ರಂದು ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಹೆಲಿಕಾಪ್ಟರ್`ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಧುಮುಕಿದ್ದ ಖಳ ನಟರಾದ ಉದಯ್, ಅನಿಲ್ ಮತ್ತೆ ಮೇಲೆ ಬಂದಿರಲಿಲ್ಲ. ನೀರಿನಲ್ಲಿ ಮುಳುಗಿ ಇಬ್ಬರೂ ಅಸುನೀಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ತಾಲೂಕಿನ ತಿಪ್ಪಗೊಂಡನಹಳ್ಳಿ ಡ್ಯಾಂ ಎಇಇ ಅನುಸೂಯ ತಾವರೆಕೆ ಪೊಲೀಸ್ ಟಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನ ಬಂಧಿಸಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ, 6 ತಿಂಗಳ ಬಳಿಕ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಮುಂದಿನ ಸುದ್ದಿ
Show comments