Webdunia - Bharat's app for daily news and videos

Install App

ಹಾರರ್ ಎಂಟರ್‌ಟೈನರ್ ಚಿತ್ರ ಚಂದ್ರಿಕಾ ಬಿಡುಗಡೆಗೆ ಸಿದ್ಧ

Webdunia
ಮಂಗಳವಾರ, 7 ಜುಲೈ 2015 (10:42 IST)
ಫ್ಲೈಯಿಂಗ್ ವೀಲ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ವಿ ಆಶಾ ಅವರ ನಿರ್ಮಾಣದಲ್ಲಿ ಯೋಗೇಶ್ ಮುನಿಸಿದ್ಧಪ್ಪ ಅವರ ನಿರ್ದೇಶನದಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ.  ಆಪ್ತಮಿತ್ರ ರೀತಿಯಲ್ಲಿ ಹಾರರ್   ಡ್ರಾಮ ಅಂಶಗಳನ್ನು ಒಳಗೊಂಡ ಚಿತ್ರ ಚಂದ್ರಿಕಾ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ  ಸಿದ್ಧವಾಗಿದೆ. ಕಾರ್ತಿಕ್ ಜಯರಾಂ ಮತ್ತು ಕಾಮನಾ ಜೆಟ್ಮಲಾನಿ,ಶ್ರೀಮುಖಿ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 
ಯೋಗೇಶ್ ಮುನಿಸಿದ್ಧಪ್ಪ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ನವ ವಿವಾಹಿತರು ಅನ್ಯೋನ್ಯ ದಾಂಪತ್ಯ ನಡೆಸುವಾಗ ಆ ಮನೆಯಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದೆ. ಈ ಚಿತ್ರದ ಪ್ರಮೋಶನಲ್ ಚಿತ್ರದ ಭಾಗವನ್ನು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಇದನ್ನು ಲಕ್ಷಾಂತರ ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. 
 
ಭಾರತೀಯ ಸಿನಿಮಾ ಚರಿತ್ರೆಯಲ್ಲಿಯೇ ಯಾರು ಮಾಡದ ಮುದ್ರೆಯನ್ನು ಆಪ್ತಮಿತ್ರ ಮಾಡಿದೆ. ಅದೇರೀತಿ ಚಂದ್ರಿಕವನ್ನು ಸಹಿತ ನಿರ್ದೇಶಕ ಯೋಗೇಶ್ ಮುನಿಸಿದ್ಧಪ್ಪ ದಾಖಲೆ ಬರೆಯುವ ರೀತಿಯಲ್ಲಿ ಸಿದ್ಧ ಮಾಡಿದ್ದಾರೆ ಎಂದು ನಿರ್ಮಾಪಕಿ ಆಶಾ ಅವರು ಹೇಳಿದ್ದಾರೆ. ಈಗ ಚಿತ್ರದ ಗ್ರಾಫಿಕ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣವಾಗಿದ್ದು ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ ಎಂದು ಆಶಾ ಮೇಡಂ ಹೇಳಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments