Webdunia - Bharat's app for daily news and videos

Install App

ತಾಳೆಹೂವ ಮೊಗದಿಂದ ಜಾರಿ ಜಾರಿ ಹೊರ ಬಂದ ಚಾಂದಿನಿ ಚಲಿಗಯಿ ಚಾಂದಿನಿ!!

Webdunia
ಸೋಮವಾರ, 20 ಅಕ್ಟೋಬರ್ 2014 (13:38 IST)
ಕೆಲವು ಹಾಡುಗಳು ಸಿಕ್ಕಾಪಟ್ಟೆ ಖ್ಯಾತಿ ಹೊಂದಿದೆ.. ಎಪ್ಪತ್ತು, ಎಂಬತ್ತರ ದಶಕದ ಹಾಡುಗಳು ಈಗ ಕೇಳಿದರು ರೋಮಾಂಚನವಾಗುತ್ತದೆ. 
 
ಡಾ. ವಿಷ್ಣುವರ್ಧನ್ ಮತ್ತು ಮಾಧವಿ ಅವರು ಅಭಿನಯಿಸಿದ್ದ ಚಿತ್ರ ಖೈದಿ. ಈ ಚಿತ್ರವು 1984  ರಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಐದು ಹಾಡುಗಳು  ಇತ್ತು. ಅದರಲ್ಲಿ ತಾಳೆ ಹೂವ ಮೊಗದಿಂದ ಹಾಡು ಅತಿ ಹೆಚ್ಚು ಜನಪ್ರಿಯವಾಗಿತ್ತು. ಈಗ ಮತ್ತೊಂದು ಖೈದಿ ತೆರೆ ಏರಿದೆ. 
 
ಅದರಲ್ಲಿ ಸಹ ಮೂಲ ತಾಳೆ ಹೂವ.. ಹಾಡನ್ನು ರೀಮಿಕ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಡಾ. ಚಾಂದಿನಿ ಮತ್ತು ಧನುಷ್ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಈ ಸಿನಿಮಾದ ಸಂಗೀತ ನಿರ್ದೇಶಕ ಜಸ್ಟಿನ್ ಉದಯ್. ಕನ್ನಡದ ಪ್ರಸಿದ್ಧ ಸಿನಿ ನಿರ್ಮಾಪಕರಾದ ಎಸ್ ಎ ಚಿನ್ನೇಗೌಡ   ಅವರ ಹುಟ್ಟು ಹಬ್ಬದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಆಯ್ತು. 
 
ಲಹರಿಯ ವೇಲು ಅವರು ಈ ಹಾಡುಗಳಿಗೆ   ಸಂಬಂಧಪಟ್ಟ ಎಲ್ಲ ಹಕ್ಕು ಪಡೆಯಲು ನಿರ್ದೇಶಕ ಗುರುದತ್ ಅವರಿಗೆ ಸಹಾಯ ಮಾಡಿದ್ದಾರೆ. ತಾಳೆ ಹೂವ.. ಹಾಡಿನಲ್ಲಿ  ಡಾ. ವಿಷ್ಣುವರ್ಧನ್ ಮತ್ತು ಮಾಧವಿ ಅವರು ನಟಿಸಿದ್ದರು. ಇದರ ರೀಮಿಕ್ಸ್ ನಲ್ಲಿ ಡಾ. ಚಾಂದಿನಿ ಮತ್ತು ಸೈಕೋ ಖ್ಯಾತಿಯ ಧನುಷ್ ಅವರು ನಟಿಸಿದ್ದಾರೆ. 
 
ಉಪೇಂದ್ರ ಅವರ ಜೊತೆ 1998  ರಲ್ಲಿ ಎ ಚಿತ್ರದಲ್ಲಿ ನಟಿಸಿದ್ದರು ಚಾಂದಿನಿ. ಅದು ಅವರ ಮೊದಲ ಚಿತ್ರ. ಡಾ. ವಿಷ್ಣುವರ್ಧನ್ ಅವರ ಪ್ರಸಿದ್ಧ ಚಿತ್ರದ ಗೀತೆಯಲ್ಲಿ ತಾನು ಅಭಿನಯಿಸಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ತಾನು ವಿಷ್ಣು ಅವರನ್ನು ತುಂಬಾ ಮಿಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ  ಡಾ. ಚಾಂದಿನಿ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments