Webdunia - Bharat's app for daily news and videos

Install App

ಡಿ ಬಾಸ್ ದರ್ಶನ್ ಕಾಟೇರ ಸಿನಿಮಾ ರಿಲೀಸ್ ದಿನಾಂಕ ಪ್ರಕಟ

Webdunia
ಬುಧವಾರ, 29 ನವೆಂಬರ್ 2023 (17:56 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ರಿಲೀಸ್ ದಿನಾಂಕ ಘೋಷಣೆಯಾಗಿದೆ.
 

ಡಿಸೆಂಬರ್ 29 ರಂದು ಕಾಟೇರ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ತರುಣ್ ಸುಧೀರ್ ಕಾಟೇರ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡುತ್ತಿದ್ದಂತೇ ದರ್ಶನ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.

ವಿಶೇಷವೆಂದರೆ ಕಾಟೇರ ಸಿನಿಮಾವನ್ನು ದೊಡ್ಡ ದೊಡ್ಡ ಸಿನಿಮಾ ರಿಲೀಸ್ ಗಳ ನಡುವೆಯೇ ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಶಾರುಖ್ ಖಾನ್ ನಾಯಕರಾಗಿರುವ ಡಂಕಿ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ.

ಅದಾದ ಒಂದೇ ವಾರಕ್ಕೆ ಕಾಟೇರ ಬಿಡುಗಡೆ ಮಾಡಿ ದರ್ಶನ್ ಬಾಕ್ಸ್ ಆಫೀಸ್ ತಾಕತ್ತು ಪ್ರದರ್ಶಿಸಲಿದ್ದಾರೆ. ದರ್ಶನ್ ಎಲ್ಲೇ ಹೋದರೂ ಪರಭಾಷಾ ಸಿನಿಮಾ ಹಾವಳಿಗಳ ನಡುವೆ ನಮ್ಮ ರಾಜ್ಯದಲ್ಲಿ ನಮ್ಮ ಕನ್ನಡ ಸಿನಿಮಾಗಳನ್ನು ಗೆಲ್ಲಿಸಿ ಎಂದು ಕರೆ ಕೊಡುತ್ತಾರೆ. ಇದೀಗ ಪರಭಾಷಾ ಸಿನಿಮಾಗಳ ಅಬ್ಬರದ ನಡುವೆ ದರ್ಶನ್‍ ಗೆ ಅಭಿಮಾನಿಗಳು ಯಾವ ರೀತಿ ಬೆಂಬಲ ಕೊಡುತ್ತಾರೆ ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ದೇವರಕೊಂಡ ಬೆನ್ನಲ್ಲೇ ಇಡಿ ಮುಂದೇ ಹಾಜರಾದ ರಾಣಾ ದಗ್ಗುಬಾಟಿ

ವಿಷ್ಣು ಸಮಾಧಿ ನೆಲಸಮ ಬಗ್ಗೆ ಕೊನೆಗೂ ಮಹತ್ವದ ತೀರ್ಮಾನ ಕೈಗೊಂಡ ಕುಟುಂಬ: ಅನಿರುದ್ಧ್ ಹೇಳಿದ್ದೇನು

ರಾಹುಲ್ ಗಾಂಧಿ ವಶಕ್ಕೆ ಪಡೆದ ಪೊಲೀಸರು

ಕಾಟೇರ ದಾಖಲೆಯನ್ನೂ ಮುರಿಯಲಿದೆ ಸು ಫ್ರಮ್ ಸೋ

ಸು ಫ್ರಮ್ ಸೋ ಸಿನಿಮಾಗೆ ನಿಜವಾಗಿಯೂ ಬಜೆಟ್ ಎಷ್ಟಾಗಿತ್ತು

ಮುಂದಿನ ಸುದ್ದಿ
Show comments