Select Your Language

Notifications

webdunia
webdunia
webdunia
webdunia

ಬಾಹುಬಲಿಗೆ ಸೆನ್ಸಾರ್ ಮಂಡಳಿ ಮಾಡಿದ ವಾಗ್ಧಾನ ಏನ್ ಗೊತ್ತೇ ?

ಬಾಹುಬಲಿಗೆ ಸೆನ್ಸಾರ್ ಮಂಡಳಿ ಮಾಡಿದ ವಾಗ್ಧಾನ ಏನ್ ಗೊತ್ತೇ ?
, ಬುಧವಾರ, 24 ಜೂನ್ 2015 (10:18 IST)
ರಾಜಮೌಳಿ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ. ಅವರು ಯಾವುದೇ ಚಿತ್ರದ ನಿರ್ದೇಶನ ಮಾಡಲಿ ಆ ಚಿತ್ರದ ಬಗ್ಗೆ ಇರುವ ಚಿತ್ರಕಥೆಯನ್ನು ಎಂದಿಗೂ ಹೊರ ಬಿಡುವುದಿಲ್ಲ. ಅದೇರೀತಿ ತನ್ನ ಚಿತ್ರದಲ್ಲಿ ಕೆಲಸ ಮಾಡುವ ಎಲ್ಲರ ಬಳಿ ವಾಗ್ಧಾನ ಪಡೆದಿರುತ್ತಾರೆ. ಈ ಕಾರಣದಿಂದ  ಅವರ ಚಿತ್ರಗಳು  ಹೆಚ್ಚು ಪ್ರಮಾಣದಲ್ಲಿ  ಜನರನ್ನು ಆಕರ್ಷಿಸುತ್ತದೆ. ಈಗ ಅವರ ಹೊಚ್ಚ ಹೊಸ ಚಿತ್ರ ಬಾಹುಬಲಿ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಅವರು ಆ ಚಿತ್ರದ ಕಥೆಯ ಬಗ್ಗೆ ಸ್ವಲ್ಪವೂ ಸುಳುಹು ನೀಡಿಲ್ಲ. ಅವರ ಚಿತ್ರದಲ್ಲಿ ಕೆಲಸ ಮಾಡಿದವರ  ಕಡೆಯಿಂದಲೂ ಸಹಿತ ಯಾವುದೇ ಬಗೆಯ ಮಾಹಿತಿ ಸಿಕ್ಕಿಲ್ಲ. 
ಈವರೆಗೂ ಆ ಸಿನಿಮಾದ ಪ್ರಮೋಶನ್ ಕೆಲಸಗಳನ್ನು  ಕ್ರಮಬದ್ಧವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಸೆನ್ಸಾರ್ ವಿಷಯದಲ್ಲಿ ಸಹ ಯಾವುದೇ ಬಗೆಯ ಗೊಂದಲ ಇಲ್ಲ.  ಸಾಮಾನ್ಯವಾಗಿ ದೊಡ್ಡ ಸಿನಿಮಾಗಳಲ್ಲಿ  ಒಂದು ವಾರಕ್ಕೆ ಮುನ್ನ  ಇಲ್ಲವೇ ನಾಲ್ಕು ದಿನಗಳಿಗೆ ಮುನ್ನ ಸೆನ್ಸಾರ್ ಮಾಡುತ್ತಾರೆ.ಬಾಹುಬಲಿಯನ್ನು ಬಿಡುಗಡೆಯ 18  ದಿನಕ್ಕೆ ಮುನ್ನವೇ ಸೆನ್ಸಾರ್ ಕೆಲಸ ಮುಗಿಸಿದ್ದಾರೆ ರಾಜಮೌಳಿ.ಅದು ಯು/ಎ ಸರ್ಟಿಫಿಕೇಟ್ ಪಡೆದಿದೆ. ಆದರೆ ಸಾಮಾನ್ಯವಾಗಿ ಸೆನ್ಸಾರ್ ಆದ ಸಿನಿಮಾಗಳು ಮೀಡಿಯ ರಿಲೇಶನ್ ಮೂಲಕ ಕೆಲವು ಸಂಗತಿಗಳು ಹೊರ ಬೀಳುವುದು ಸಹಜ ಪ್ರಕ್ರಿಯೆ. ಆದರೆ ರಾಜಮೌಳಿ ಮಾತ್ರ ತನ್ನ ಚಿತ್ರಕ್ಕೆ ಸಂಬಂಧಪಟ್ಟ ಯಾವುದೇ ಸಂಗತಿಗಳು ಹೊರಬರಬಾರದು ಎಂದು ಸೆನ್ಸಾರ್ ಮಂದಿಯ ಬಳಿ ಕೇಳಿಕೊಂಡಿದ್ದಾರೆ ರಾಜಮೌಳಿ. 
 
ಈ ಕಾರಣದಿಂದ ತಮಗೆ ಆ ಬಗ್ಗೆ ಯಾವುದೇ ಭಯ ಇಲ್ಲ ಎನ್ನುವ ಮಾತು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಸಣ್ಣ ವಿಷಯ ಲೀಕ್ ಆದರೂ ಅದರ ಬಗ್ಗೆ ಇರುವ ಥ್ರಿಲ್ ಹಾಳಾಗುತ್ತದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ ಸೆನ್ಸಾರ್ ಅವರಿಗೆ. ಸೆನ್ಸಾರ್ ಮಂಡಳಿಯವರು ಸಹಿತ ತಾವು ಲೀಕ್ ಆಗದೆ ಇರುವುಂತೆ  ಎಚ್ಚರ ವಹಿಸುತ್ತೇವೆ ಎನ್ನುವ ವಾಗ್ಧಾನ ಮಾಡಿದ್ದಾರಂತೆ. ಇಷ್ಟೆಲ್ಲಾ ರಹಸ್ಯಗಳನ್ನು ಹೊಂದಿರುವ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಜನರಲ್ಲಿ ಉಂಟಾಗಿದೆ. ಆ ಕುತೂಹಲ ತಣಿಯಲು ಚಿತ್ರದ ಬಿಡುಗಡೆಗೆ ಇನ್ನು ಸ್ವಲ್ಪ ದಿನಗಳು ಕಾಯ ಬೇಕು ಅಷ್ಟೇ! 

Share this Story:

Follow Webdunia kannada