Webdunia - Bharat's app for daily news and videos

Install App

ಖ್ಯಾತ ಗಾಯಕಿ, ನಟಿ ವಸುಂಧರಾ ದಾಸ್ ಗೆ ಕಿರುಕುಳ ನೀಡಿದ ಕ್ಯಾಬ್ ಚಾಲಕ

Webdunia
ಶುಕ್ರವಾರ, 2 ನವೆಂಬರ್ 2018 (11:31 IST)
ಬೆಂಗಳೂರು : ಕ್ಯಾಬ್ ಚಾಲಕನೊಬ್ಬ ಖ್ಯಾತ ಗಾಯಕಿ, ನಟಿ ವಸುಂಧರಾ ದಾಸ್ ಗೆ ಕಿರುಕುಳ ನೀಡಿದ ಘಟನೆ ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಲ್ಲಿ ಅ. 29 ರಂದು ನಡೆದಿದೆ.


ಅಂದು ಸಂಜೆ 4.30 ರ ಸುಮಾರಿಗೆ ಇಟಿಯಾಸ್ ಕಾರು ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್ ನಿಂದ ವಸುಂಧರಾ ದಾಸ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಮಲ್ಲೇಶ್ವರಂ 18 ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಾರಿನ ಬಾಗಿಲು ತೆರೆಯಲು ಯತ್ನಿಸಿದ ಎಂದು ಆರೋಪಿಸಿ ವಸುಂಧರಾ ದಾಸ್ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಐಪಿಸಿ ಸೆಕ್ಸನ್ 509, 341, 354 ಮತ್ತು 504 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.


ವಸುಂಧರಾ ದಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಇಂದು ದಾಖಲೆಯ ಗಳಿಕೆ ಮಾಡುವುದು ಖಚಿತ, ಕಾರಣ ಇಲ್ಲಿದೆ

ಪ್ರಶಾಂತ್ ಆಗಿದ್ದ ರಿಷಬ್ ಶೆಟ್ಟಿ ಹೆಸರು ಬದಲಾಯಿಸಲು ಕಾರಣವಾಗಿದ್ದು ಏನು

BBK12: ಜಾನ್ವಿ ಡಿವೋರ್ಸ್ ಬಗ್ಗೆ ಶಾಕಿಂಗ್ ವಿಚಾರ ಹೊರಹಾಕಿದ ಮಾಜಿ ಪತಿ ಕಾರ್ತಿಕ್

ಕಾಂತಾರ ಚಾಪ್ಟರ್ 1 ಮೂರು ದಿನದಲ್ಲಿ ಗಳಿಸಿದ್ದೆಷ್ಟು, ವೀಕೆಂಡ್ ಹೆಚ್ಚಾಯ್ತಾ ಇಲ್ಲಿದೆ ವರದಿ

ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

ಮುಂದಿನ ಸುದ್ದಿ
Show comments