Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಲೇಡಿ ಇಮ್ರಾನ್ ಹಶ್ಮಿ ಸೀರಿಯಲ್ ಕಿಸ್ಸರ್ ಆಲಿಯ ಭಟ್

ಬಾಲಿವುಡ್ ನ ಲೇಡಿ ಇಮ್ರಾನ್ ಹಶ್ಮಿ ಸೀರಿಯಲ್ ಕಿಸ್ಸರ್  ಆಲಿಯ ಭಟ್
, ಶನಿವಾರ, 18 ಅಕ್ಟೋಬರ್ 2014 (14:20 IST)
ಬಾಲಿವುಡ್ ನಲ್ಲಿ ಸಿರಿಯಲ್ ಕಿಸ್ಸರ್ ಯಾರು ಎಂದರೆ ಎಲ್ಲರು ಇಮ್ರಾನ್ ಹಶ್ಮಿ ಕಡೆ ತಮ್ಮ ಬೆರಳು ತೋರಿಸುತ್ತಾರೆ. ಅದೇರೀತಿ ಹೆಣ್ಣುಮಕ್ಕಳಲ್ಲಿ  ಯಾರು ಸೀರಿಯಲ್ ಕಿಸ್ಸರ್ ಎಂದರೆ ಎಲ್ಲರ ಗಮನ ಹೋಗುವುದು ಆಲಿಯ ಭಟ್ ಕಡೆಗೆ. 
 
ಸ್ಟೂಡೆಂಟ್ ಆಫ್ ದಿ ಇಯರ್, ಹೈವೇ, 2 ಸ್ಟೇಟ್ಸ್, ಹಂಪ್ಟಿ ಶರ್ಮ ಕಿ ದುಲ್ಹನಿಯಾ ಸೇರಿದಂತೆ ಈವರೆಗೂ ಆಕೆ ನಟಿಸಿದ ನಾಲ್ಕು ಚಿತ್ರಗಳಲ್ಲೂ  ಮುದ್ದಾಟಕ್ಕೆ ಹೆಚ್ಚು ಆದ್ಯತೆ ನೀಡಿದ್ದಾಳೆ.  
 
ತನ್ನ ಜೊತೆಗಾರ ಹೀರೋಗೆ ಮುತ್ತಿನ ಸುರಿಮಳೆ ಮಾಡಿದ್ದಾಳೆ. ಆದ್ದರಿಂದ ಎಲ್ಲರು ಆಕೆಯನ್ನು ಲೇಡಿ ಇಮ್ರಾನ್ ಹಶ್ಮಿ ಎಂದು ಕರೆಯುತ್ತಿದ್ದಾರೆ. ಈಗ ಆಕೆ ನಟಿಸುತ್ತಿರುವ ಶಾಂದಾರ್ ಚಿತ್ರದಲ್ಲಿ ಶಾಹಿದ್ ಕಪೂರ್ ಆಲಿಯ ಜೋಡಿಯಾಗಿದ್ದಾಳೆ.
 
ಈ ಶೂಟಿಂಗ್ ಆರಂಭ ಆಗುವ ಮುನ್ನವೇ  ಈಬಾರಿ ಆಲಿಯ ಅಧರಾಮೃತ ಸವಿಯುವ ಭಾಗ್ಯಶಾಲಿ ಶಾಹಿದ್ ಎಂದು ಬಾಲಿವುಡ್ ನಲ್ಲಿ ಸುದ್ದಿಗಳು ಜೋರಾಗಿ ಹರಡಿವೆ. ಅದಕ್ಕೆ ಪೂರಕವಾಗಿ ಈ ಚಿತ್ರದಲ್ಲಿ ಕಿಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲು ನಿರ್ದೇಶಕ ವಿಕಾಶ್ಬಾಲ್ ಪ್ಲಾನ್ ಮಾಡಿದ್ದಾರಂತೆ. ಆ ಕಿಸ್ಸಿಂಗ್ ಸೀನ್ ಸಾಮಾನ್ಯವಾಗಿ ಇರುವುದಿಲ್ಲವಂತೆ ತುಂಬಾ ವಿಶೇಷವಂತೆ! 
 
ಈವರೆಗೂ ಆಲಿಯ ಮಾಡಿದ ಲಿಪ್ ಲಾಕ್ ಗಳನ್ನೂ ಈ ಸಿನಿಮಾದ ಮುತ್ತಾಟ ಮೀರಿಸುತ್ತದೆ ಎಂದು ತಿಳಿದು ಬಂದಿದೆ.ಕಥೆಗೆ ಈ ಲಿಪ್ ಲಾಕ್ ತುಂಬಾ ಮುಖ್ಯ ಎಂದು ಹೇಳಿದ್ದಾರೆ ನಿರ್ದೇಶಕರು. ಈಗ ಇನ್ನು ಶೂಟಿಂಗ್ ನಡೆಯುತ್ತಿದೆ ಈ ಚಿತ್ರಕ್ಕೆ. ಆಲಿಯ ಮುತ್ತಿನ ಆಟ ನೋಡ ಬೇಕೆಂದರೆ ಮುಂದಿನ ವರ್ಷದ ವರೆಗೂ ಕಾಯಬೇಕು. 
 

Share this Story:

Follow Webdunia kannada