Select Your Language

Notifications

webdunia
webdunia
webdunia
webdunia

ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆಯುತ್ತಿರುವ ಬ್ಯಾಂಗ್ ಬ್ಯಾಂಗ್

ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆಯುತ್ತಿರುವ ಬ್ಯಾಂಗ್ ಬ್ಯಾಂಗ್
, ಮಂಗಳವಾರ, 14 ಅಕ್ಟೋಬರ್ 2014 (11:11 IST)
ಬಾಲಿವುಡ್ ಹೀರೋ ಹೃತಿಕ್ ರೋಶನ್ ಹಾಗೂ ಕತ್ರಿನಾ ಕೈಫ್ ಒಟ್ಟಿಗೆ ನಟಿಸಿರುವ ಫಾಕ್ಸ್  ಸ್ಟಾರ್ ಸ್ಟುಡಿಯೋಸ್‌ ನಿಂದ ನಿರ್ಮಾಣ ಆಗಿರುವ ಚಿತ್ರ ಬ್ಯಾಂಗ್ ಬ್ಯಾಂಗ್. ಇದನ್ನು ಸಿದ್ಧಾರ್ಥ್ ಆನಂದ್ ಅವರು ನಿರ್ದೇಶಿಸಿದ್ದಾರೆ.
 
ಈ ಚಿತ್ರ ಬಿಡುಗಡೆ ಆದ ದಿನದಿಂದ  ಬಾಕ್ಸಾಫೀಸಲ್ಲಿ ಹಣ ಕೊಳ್ಳೆ ಹೊಡೆಯುತ್ತಿದೆ. ಹನ್ನೊಂದು ದಿನಗಳಲ್ಲಿ ಅದು ವಿಶ್ವವ್ಯಾಪಿಯಾಗಿ  290.97  ಕೋಟಿ ರೂಪಾಯಿಗಳು ಗಳಿಕೆ  ಮಾಡಿದೆ. ಭಾರತದಲ್ಲಿ 154.68 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ.  
 
ಈ ತಿಂಗಳು ಆರಂಭಿಕ ವಾರದಲ್ಲಿ ಬಿಡುಗಡೆ ಆದ ಈ ಚಿತ್ರವೂ ಓವರ್ಸೀಸ್  ಮಾರ್ಕೆಟ್‌ನಲ್ಲಿ ಸಹಿತ 70 ಕೋಟಿಗಳಷ್ಟು ಗಳಿಕೆ ಮಾಡಿದೆ. ಈ ಚಿತ್ರವನ್ನು 140  ಕೋಟಿ ರೂಪಾಯಿಗಳ ಮೊತ್ತದಲ್ಲಿ ನಿರ್ಮಿಸಲಾಗಿದೆ. ಇದು ಭಾರತ ಮಾತ್ರವಲ್ಲ ಬ್ರಿಟನ್ , ಅಮೆರಿಕ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ್ ದೇಶದ ಪ್ರೇಕ್ಷಕರನ್ನು ಆಕರ್ಷಿಸಿದೆ. 

Share this Story:

Follow Webdunia kannada