Select Your Language

Notifications

webdunia
webdunia
webdunia
webdunia

ನನ್ನ ಕೆಲಸದ ಬಗ್ಗೆ ನನಗೆ ಸಿಕ್ಕಾಪಟ್ಟೆ ಆಸ್ಥೆ: ಬಿಪಾಸ ಬಸು

ನನ್ನ ಕೆಲಸದ ಬಗ್ಗೆ ನನಗೆ ಸಿಕ್ಕಾಪಟ್ಟೆ ಆಸ್ಥೆ: ಬಿಪಾಸ ಬಸು
, ಮಂಗಳವಾರ, 21 ಅಕ್ಟೋಬರ್ 2014 (12:59 IST)
ತನ್ನ ಕೆಲಸದ ಬಗ್ಗೆ ತನಗೆ ಸಿಕ್ಕಾಪಟ್ಟೆ ಆಸ್ಥೆ. ತಾನು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಂತಹ ಪರಿಸ್ಥಿತಿಯಲ್ಲೂ ಸಹ ತನ್ನನ್ನು ನಂಬಿರುವ ನಿರ್ದೇಶಕ, ನಿರ್ಮಾಪಕ ಮತ್ತು ಸಹ ಕಲಾವಿದರಿಗೆ ಕಿರಿಕಿರಿ ಉಂಟು ಮಾಡುವುದಿಲ್ಲ ಎಂದು ಹೇಳಿದ್ದಾಳೆ ಬಿಪಾಸ ಬಸು. 
 
ಎಲ್  ನೋ ಎನ್ನುವ  ಅತಿಮಾನುಷ ಅಂಶಗಳನ್ನು ಹೊಂದಿರುವ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದೆ ಶೂಟಿಂಗ್ ಸಮಯದಲ್ಲಿ ಮಂಡಿಗೆ ಗಾಯ ಮಾಡಿಕೊಂಡಿದ್ದಾಳೆ. ಈ ಚಿತ್ರವಲ್ಲದೆ ಭೂಷಣ್ ಪಟೇಲ್ ಅವರ ನಿರ್ದೇಶನದ ಕರಣ್ ಸಿಂಗ್ ಗ್ರೋವರ್ ಹೀರೋ ಆಗಿರುವ ಚಿತ್ರದಲ್ಲಿ ಸಹ ಬಿಪ್ ನಟಿಸುತ್ತಿದ್ದಾಳೆ. 
 
ಈ ಮೊದಲು ಬಿಪ್ ವಿಕ್ರಮ್ ಭಟ್ ಅವರ ನಿರ್ದೇಶನದ ಕ್ರೀಚರ್ 3ಡಿ ಚಿತ್ರದಲ್ಲೂ ಸಹ ಅಭಿನಯಿಸಿದ್ದಳು. ಈ ಎರಡು ಚಿತ್ರಗಳಿಗೂ ನ್ಯಾಯ ಒದಗಿಸ ಬೇಕು ಎನ್ನುವ ಉದ್ದೇಶದಿಂದ ಆಕೆಗೆ ಕಾಲು ಊತ ಹೊಂದಿದರೂ, ಗಾಯವಾದರೂ ಸಹಿತ ಯಾವುದೇ ರೀತಿಯಲ್ಲೂ ತೊಂದರೆ ನೀಡದೆ ಶೂಟಿಂಗ್ ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. 
'
ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ನಟಿಸುತ್ತಿದ್ದಾಳೆ. ಆ ಸಂಗತಿಯನ್ನು ಇನ್ ಸ್ಟಾ ಗ್ರಾಂ ನಲ್ಲಿ ತಿಳಿಸಿದ್ದಾಳೆ. ಕಾಲು ನೋವು ಇರುವುದು ಸತ್ಯ. ಎಷ್ಟೇ ನೋವಿದ್ದರೂ ತಾನು ಶೂಟಿಂಗ್ ನಲ್ಲಿ ಭಾಗವಹಿಸುವುದು ಬಿಟ್ಟಿಲ್ಲ. ತನ್ನ ಕಾರಣದಿಂದ ಶೂಟಿಂಗ್ ನಿಲ್ಲ ಬಾರದು ಎನ್ನುವ ಉದ್ದೇಶ ತನ್ನದು ಎನ್ನುವ ಮಾತು ಹೇಳಿದ್ದಾಳೆ . 
 

Share this Story:

Follow Webdunia kannada