Webdunia - Bharat's app for daily news and videos

Install App

BBK11: ಬಿಗ್ ಬಾಸ್ ಶೋಗೆ ಜಗದೀಶ್ ನಿಂದಲೇ ಟಿಆರ್ ಪಿ ಎನ್ನುತ್ತಿದ್ದವರಿಗೆ ಹೊಡೆದ ಹಾಗಿದೆ ಈ ವಾರದ ಟಿಆರ್ ಪಿ

Krishnaveni K
ಗುರುವಾರ, 21 ನವೆಂಬರ್ 2024 (15:59 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ಇದ್ದಾಗ ಮಾತ್ರ ಟಿಆರ್ ಪಿ. ಅವರಿಂದಲೇ ಶೋ ಭರ್ಜರಿ ರೇಟಿಂಗ್ ಪಡೆಯುತ್ತಿತ್ತು ಎನ್ನುತ್ತಿದ್ದವರಿಗೆ ಮುಟ್ಟಿ ನೋಡಿಕೊಳ್ಳುವ ಹಾಗಿದೆ ಈ ವಾರದ ಟಿಆರ್ ಪಿ.

ಈ ವಾರದ ಕಿರುತೆರೆ ವಾಹಿನಿಗಳ ಟಿಆರ್ ಪಿ ಲಿಸ್ಟ್ ಹೊರಬಿದ್ದಿದ್ದು ಬಿಗ್ ಬಾಸ್ ಶೋ ಮತ್ತೆ ಭರ್ಜರಿ ಟಿಆರ್ ಪಿ ಪಡೆದುಕೊಂಡಿದೆ. ಈ ಸೀಸನ್ ನಲ್ಲಿ ಬಿಗ್ ಬಾಸ್ ದಾಖಲೆಯ ಟಿಆರ್ ಪಿ ಪಡೆದುಕೊಂಡಿತ್ತು. ಆಗ ಜಗದೀಶ್ ಮನೆಯಲ್ಲಿದ್ದರು. ಅವರ ಕಾರಣಕ್ಕೇ ಟಿಆರ್ ಪಿ ಬಂದಿದೆ ಎಂದು ಹಲವರು ಕೊಚ್ಚಿಕೊಂಡಿದ್ದರು.

ಆದರೆ ಅವರು ಹೊರ ಹೋದ ಬಳಿಕವೂ ಬಿಗ್ ಬಾಸ್ ಟಿಆರ್ ಪಿ ಕಡಿಮೆಯಾಗಿಲ್ಲ. ವಿಶೇಷವಾಗಿ ಕಿಚ್ಚನ ವೀಕೆಂಡ್ ಶೋಗೆ ಭರ್ಜರಿ ರೇಟಿಂಗ್ ಬರುತ್ತಿದೆ. ಈ ವಾರಂತ್ಯದ ಶೋನಲ್ಲಿ ಸುದೀಪ್ ಸ್ಪರ್ಧಿ ಚೈತ್ರಾಗೆ ಬೆವರಿಳಿಸಿದ್ದರು. ಅವರ ಈ ಎಪಿಸೋಡ್ ನ್ನು ಸಾಕಷ್ಟು ಜನ ವೀಕ್ಷಣೆ ಮಾಡಿದ್ದಾರೆ.

ಪರಿಣಾಮ ಈ ವಾರ ಶನಿವಾರದ ಎಪಿಸೋಡ್ ಗೆ 8.7 ಮತ್ತು ಭಾನುವಾರದ ಎಪಿಸೋಡ್ ಗೆ 9.1 ಟಿಆರ್ ಪಿ ಬಂದಿದೆ. ವಾರದ ದಿನಗಳಲ್ಲಿ ಸರಾಸರಿ 7.4 ಟಿವಿಆರ್ ಪಾಯಿಂಟ್ ಬಂದಿದೆ. ಹೀಗಾಗಿ ಬಿಗ್ ಬಾಸ್ ನಲ್ಲಿ ಯಾರು ಬಂದರೂ ಇಲ್ಲದೇ ಇದ್ದರೂ ವೀಕ್ಷಕರಂತೂ ಇದ್ದೇ ಇದ್ದಾರೆ ಎನ್ನುವುದು ಪಕ್ಕಾ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ದರ್ಶನ್ ಪರ ಅಖಾಡಕ್ಕಿಳಿದ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಕಳುಹಿಸಿದ್ರು ಸ್ಪಷ್ಟ ಸಂದೇಶ

ಬಿಗ್‌ಬಾಸ್‌ ವಿನ್ನರ್‌, ಯುಟ್ಯೂಬರ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳಿಂದ ಗುಂಡಿನ ಮಳೆ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಮುಂದಿನ ಸುದ್ದಿ
Show comments