Webdunia - Bharat's app for daily news and videos

Install App

ಏಳು ಪದ್ಮ ಪ್ರಶಸ್ತಿಗಳನ್ನು ಗಳಿಸಿರುವ ಬಿಗ್ ಬಿ ಕುಟುಂಬ

Webdunia
ಬುಧವಾರ, 28 ಜನವರಿ 2015 (10:34 IST)
ಬಾಲಿವುಡ್‌ನ ಮೆಗಾ ಸ್ಟಾರ್ ಭಾರತೀಯ ಚಿತ್ರರಂಗದ ಹೆಮ್ಮೆಯ ಕಲಾವಿದ ಅಮಿತಾಬ್ ಬಚ್ಚನ್ ಅವರಿಗೆ ಈಗ ಮತ್ತೊಂದು ಪದ್ಮ ಪ್ರಶಸ್ತಿ ದೊರೆತು ಅವರು ಅಗ್ರಮಾನ್ಯ ಕಲಾವಿದ ಎನ್ನುವುದನ್ನು ಸಾಬೀತು ಮಾಡಿದೆ. ಅಮಿತಾಬ್ ಬಚ್ಚನ್ ಅವರಿಗೆ ಈಗಾಗಲೇ ಪದ್ಮ ಪ್ರಶಸ್ತಿಗಳಲ್ಲಿ ಪದ್ಮಶ್ರೀ, ಪದ್ಮ ಭೂಷಣ್ ದೊರೆತಿದೆ.
ಈಗ ಪದ್ಮವಿಭೂಷಣ್ ದೊರೆತು ಆ ಮುಖಾಂತರ ಅವರಿಗೆ ಮೂರು ಪದ್ಮ ಪ್ರಶಸ್ತಿಗಳು ದೊರಕಿದಂತಾಗಿವೆ. ಬಿಗ್ ಬಿ ಅವರಿಗೆ 1984ರಲ್ಲಿ ಪದ್ಮಶ್ರೀ ಮತ್ತು 2001ರಲ್ಲಿ ಪದ್ಮಭೂಷಣ್ ಪ್ರಶಸ್ತಿ ದೊರಕಿತ್ತು. 2015ರಲ್ಲಿ ಅವರಿಗೆ ಪದ್ಮ ವಿಭೂಷಣ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಅಲ್ಲದೆ ಮತ್ತೊಂದು ಮುಖ್ಯ ಸಂಗತಿ ಎಂದರೆ ಈ ಕುಟುಂಬಕ್ಕೆ ಪದ್ಮ ಪ್ರಶಸ್ತಿಗಳು ಹೊಸತಲ್ಲ.
 
ತಮಗೆ ಪದ್ಮ ವಿಭೂಷಣ್ ದೊರಕುವುದರ ಮೂಲಕ ತಮ್ಮ ಕುಟುಂಬಕ್ಕೆ ಏಳು ಪದ್ಮ ಪ್ರಶಸ್ತಿಗಳು ದೊರೆತಿದೆ ಎನ್ನುವ ಅಂಶವನ್ನು ತಿಳಿಸಿದ್ದಾರೆ ಅಮಿತಾಬ್ ಬಚ್ಚನ್. ತನ್ನ ತಂದೆ ಹರಿವಂಶ್ ರಾಯ್ ಬಚ್ಚನ್ ಅವರಿಗೆ ಪದ್ಮಶ್ರೀ ಪದ್ಮಭೂಷಣ್, ತನ್ನ ಪತ್ನಿ ಜಯಾ ಬಚ್ಚನ್‌ಗೆ ಪದ್ಮಶ್ರೀ ಹಾಗೂ ಸೊಸೆ ಐಶ್ವರ್ಯಾ ರೈ ಅವರಿಗೂ ಕೂಡ ಪದ್ಮಶ್ರೀ ದೊರೆತಿದೆ. 
 
ಈ ಸಂಗತಿಯನ್ನು ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಈ ಮಧ್ಯೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನಕ್ಕೆ ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಅಮಿತಾಬ್ ಬಚ್ಚನ್ ಎಂದು ಪಶ್ಚಿಮ  ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಅಮಿತಾಬ್ ಅದಕ್ಕೆ ತಾನು ಇನ್ನು ಅರ್ಹನಲ್ಲ ಎಂದು ಹೇಳಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments