Select Your Language

Notifications

webdunia
webdunia
webdunia
webdunia

ಸುನಿಲ್ ದತ್ ಪಾತ್ರದಲ್ಲಿ ಬಿಗ್ ಬಚ್ಚನ್ ?

ಸುನಿಲ್ ದತ್ ಪಾತ್ರದಲ್ಲಿ ಬಿಗ್ ಬಚ್ಚನ್ ?
, ಮಂಗಳವಾರ, 27 ಜನವರಿ 2015 (11:16 IST)
ಈಗಾಗಲೇ ಎಪ್ಪತ್ತು  ವಯೋಮಿತಿ, ಮೂರು ಸಿನಿಮಾಗಳು , ಅನೇಕ  ಜಾಹೀರಾತುಗಳು, ಟೀವಿ ಷೋ ಮಾಡುತ್ತಾ ಸದಾ ಬ್ಯುಸಿಯಾಗಿರುವ ಹಿರಿಯ ಕಲಾವಿದ ಬಿಗ್ ಬಚ್ಚನ್ ಅವರ ನಟನೆಯ ಶಮಿತಾಬ್ ಮತ್ತು ಪೀಕು ಈಗ ಬಿಡುಗಡೆಯ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈಗ ಅಮಿತಾಬ್ ಅವರು ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ , ಹಾಗಂತ ಸುದ್ದಿ ಹರಡಿದೆ. ಅದು ನಿಜ ಬದುಕಿನ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ. ಆ ವಿಷಯದ ವಿವರ ಹೀಗಿದೆ, 3 ಇಡಿಯೇಟ್ಸ್, ಪೀಕೆ ಯಂತಹ ಚಿತ್ರಗಳನು ನಿರ್ದೇಶಿಸಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ. ಅವರು ಈಗ ನಟ ಸಂಜಯ್ ದತ್ ಅವರ ಜೀವನ ಚರಿತ್ರೆಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅದರಲ್ಲಿ ಹಿರಿಯ ನಟ ಸಂಜಯ್ ದತ್ ಅವರ ಪಾತ್ರವನ್ನು ಅಮಿತಾಬ್ ಬಚ್ಚನ್ ಅವರು ಮಾಡುತ್ತಿದ್ದಾರೆ. ಹೀಗಂತ ಸುದ್ದಿ ಹರಡಿದೆ. 
ಸಂಜಯ್ ದತ್ ಅವರ ಪಾತ್ರಧಾರಿಯಾಗಿದ್ದಾರೆ ರಣಬೀರ್ ಕಪೂರ್. ಸುನಿಲ್ ದತ್ ಪಾತ್ರಕ್ಕೆ ಅಮಿತಾಬ್ ಅವರನ್ನು ಸಂಪರ್ಕಿಸಲಾಗಿದೆ ಎನ್ನುವ ಸುದ್ದಿ ಇದೆ. ಈ  ಚಿತ್ರದ ಬಗ್ಗೆ ಯಾವ ನಿರ್ಧಾರ ಬಿಗ್ ಬಿ ಕೈಗೊಂಡಿದ್ದಾರೆ ಎನ್ನುವುದು ಸದ್ಯಕ್ಕೆ ಮಾಧ್ಯಮಗಳಿಗೆ ತಿಳಿದು ಬಂದಿಲ್ಲ. 
 

Share this Story:

Follow Webdunia kannada