Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾದಲ್ಲಿ ನಟಿಸ್ತಾರಂತೆ ಅಮಿತಾಬ್ ಬಚ್ಚನ್

ಕನ್ನಡ ಸಿನಿಮಾದಲ್ಲಿ ನಟಿಸ್ತಾರಂತೆ ಅಮಿತಾಬ್ ಬಚ್ಚನ್
, ಶನಿವಾರ, 22 ಆಗಸ್ಟ್ 2015 (13:01 IST)
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ನಟಿಸಲಿದ್ದಾರೆ ಅಂತ ಬಹಳ ದಿನಗಳಿಂದಲೂ ಸುದ್ದಿ ಆಗುತ್ತಲೇ ಇದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೊತೆ ಅಮಿತಾಬ್ ಸ್ಕ್ರೀನ್ ಶೇರ್ ಮಾಡ್ತಾರೆ ಅಂತ ಹೇಳಲಾಗುತ್ತಿದೆ. ಆದ್ರೆ, ಈವರೆಗೆ ಯಾವುದು ಪಕ್ಕಾ ಆಗಿಲ್ಲ. 
  
ಹೀಗಿರುವಾಗಲೇ, ಅಮಿತಾಬ್ ಬಚ್ಚನ್ ನಮ್ಮ ಸ್ಯಾಂಡಲ್ ವುಡ್ ಕೃಷ್ಣ ಅಜೇಯ್ ರಾವ್ ಜೊತೆ ನಟಿಸುತ್ತಿದ್ದಾರೆ ಅಂತ ಸುದ್ದಿ ಹರಡಿದೆ. ಇದಕ್ಕೆ ಕಾರಣ ಈ ಫೋಟೋ. ಅಮಿತಾಬ್ ಬಚ್ಚನ್ ಜೊತೆ ಅಜೇಯ್ ರಾವ್ ಕ್ಲಿಕ್ ಮಾಡಿಸಿಕೊಂಡಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಜೇಯ್ ಶೇರ್ ಮಾಡಿದ್ದಾರೆ. 
 
'ಅಮೃತಧಾರೆ' ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ ಬಳಿಕ ಅಮಿತಾಬ್ ಬಚ್ಚನ್ ಇತ್ತ ತಿರುಗಿ ನೋಡಿರಲಿಲ್ಲ. ಈಗ ಅವರು ಯಾರ ಚಿತ್ರದ ಮೂಲಕ ಮತ್ತೆ ಕನ್ನಡ ಬೆಳ್ಳಿತೆರೆ ಮೇಲೆ ಮಿಂಚುತ್ತಾರೋ ಕಾದು ನೋಡಬೇಕು. 

Share this Story:

Follow Webdunia kannada