Select Your Language

Notifications

webdunia
webdunia
webdunia
webdunia

ಸರಳವಾಗಿ ಬರ್ತಡೇ ಆಚರಿಸಿಕೊಂಡ ಬಿಗ್ ಬಿ

ಸರಳವಾಗಿ ಬರ್ತಡೇ ಆಚರಿಸಿಕೊಂಡ ಬಿಗ್ ಬಿ
, ಸೋಮವಾರ, 12 ಅಕ್ಟೋಬರ್ 2015 (11:40 IST)
ಬಾಲಿವುಡ್ ನ ಬಿ ಅಮಿತಾಬ್ ಬಚ್ಚನ್ ನಿನ್ನೆ ತಮ್ಮ 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ಕುಟುಂಬದವರೊಂದಿಗೆ ಬಿಗ್ ಅತ್ಯಂತ ಸರಳವಾಗಿ ಬರ್ತಡೇ ಆಚರಿಸಿಕೊಂಡ್ರು.
ಹುಟ್ಟುಹಬ್ಬದ ಬಗ್ಗೆ ಮಾತನಾಡಿದ ಬಿಗ್ ಬಿ ನಾನು ಈ ದಿನವನ್ನು ಎಲ್ಲಾ ದಿನಗಳಂತೆ ಆರಾಮಾಗಿಯೇ ಕಳೆಯುತ್ತೇನೆ. ಆ ದಿನ ನನ್ನ ಪಾಲಿಗೆ ಹೆಚ್ಚೇನು ಸ್ಪೆಷಲ್ ಆಗಿರೋದಿಲ್ಲ ಅಂತಾ ಬಿಗ್ ಬಿ ಹೇಳಿದ್ರು. ಅಲ್ಲದೇ ನಾನು ವೃತ್ತಿ ಜೀವನದಲ್ಲೂ ಜೊತೆಗೆ ವೈಯುಕ್ತಿಕವಾಗಿಯೂ ತುಂಬಾನೇ ಖುಷಿಯಾಗಿದ್ದೇನೆ ಎಂದರು. ವಯಸ್ಸೂ 73 ಆದ್ರೂ ಇಂದಿಗೂ ನನಗೆ ಹೊಸ ವಿಷಯಗಳನ್ನು ಕಲಿಯೋದು ಅಂದರೆ ತುಂಬಾನೇ ಆಸಕ್ತಿ ಎಂದು ಹೇಳಿದ್ದಾರೆ.
 
ಸದ್ಯ ವಾಜೀರ್ ಸಿನಿಮಾದಲ್ಲಿ ಅಭಿನಯಿಸಿರುವ ಬಿಗ್  ಬಿ ಅದಿತಿ ರಾವ್ ಹೈದಾರಿ ಹಾಗೂ ಇರ್ಫಾನ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಡಿಸೆಂಬರ್ 4 ರಂದು ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ಕಾಯುತ್ತಿದ್ದಾರೆ ಅಮಿತಾಬ್ ಬಚ್ಚನ್.

Share this Story:

Follow Webdunia kannada