Select Your Language

Notifications

webdunia
webdunia
webdunia
webdunia

ಒಂದೇ ವೇದಿಕೆಯ ಮೇಲೆ ಬಿಗ್ ಬಿ - ಸೂಪರ್ ಸ್ಟಾರ್ ರಜನಿಕಾಂತ್

ಒಂದೇ ವೇದಿಕೆಯ ಮೇಲೆ ಬಿಗ್ ಬಿ - ಸೂಪರ್ ಸ್ಟಾರ್ ರಜನಿಕಾಂತ್
, ಬುಧವಾರ, 12 ನವೆಂಬರ್ 2014 (12:52 IST)
ಭಾರತೀಯ ಚಿತ್ರರಂಗದಲ್ಲಿ ಅನೇಕ ಸ್ಟಾರ್ ಗಳು ಇದ್ದಾರೆ ಆದರೆ ಅವರೆಲ್ಲರಿಗೂ ಸ್ಟಾರ್ ಆಗಿರುವವರು ಒಂದಷ್ಟು ಜನ ಮಾತ್ರ ಅವರಲ್ಲಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಖ್ಯರು. 
 
ಈ ಜೋಡಿ ಈಗ ಒಂದೇ ವೇದಿಕೆಯನ್ನು ಹಂಚಿಕೊಳ್ಳುವತ್ತ ತಮ್ಮ ಗಮನ ನೆಟ್ಟಿದ್ದಾರೆ. ಆದರೆ ಅವರಿಬ್ಬರೂ ಎಲ್ಲಿ ವೇದಿಕೆಯನ್ನು ಹಂಚಿಕೊಳ್ಳುತ್ತಾರೆ ಎನ್ನುವ ಕುತೂಹಲ ನಿಮಗಿದೆ ಎನ್ನುವುದನ್ನು ನಾವು ಬಲ್ಲೆವು, ನಿಮ್ಮ ಸಂದೇಹ ಈಗ ದೂರ ಮಾಡುತ್ತೇವೆ. 
 
ರಜನಿಕಾಂತ್  ಮತ್ತು ಬಿಗ್ ಬಿ ಅವರು ಇದೆ ತಿಂಗಳು 20 ನೇ ತಾರೀಖಿನಂದು  ಗೋವಾದಲ್ಲಿ ನಡೆಯುವ  45 ನೇ  ಭಾರತ -ಅಂತಾರಾಷ್ಟ್ರೀಯ  ಸಿನಿಮಾ ಉತ್ಸವದಲ್ಲಿ ( ಇಂಟರ್ ನ್ಯಾಷನಲ್ ಫೆಸ್ಟಿವಲ್ ಆಫ್ ಇಂಡಿಯಾ- 2014) ದಲ್ಲಿ ಭಾಗವಹಿಸುತ್ತಿದ್ದಾರೆ. 
 
ಅಮಿತಾಬ್ ಬಚ್ಚನ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ ಎಂದು ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆ ಮಂತ್ರಿ  ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.ಚಲನ ಚಿತ್ರ ಪ್ರಮುಖರಿಗೆ ನೀಡುವ ವಿಶೇಷ ಸೆಂಚುನರಿ ಪ್ರಶಸ್ತಿಯನ್ನು ಈ ಬಾರಿ ರಜನಿಕಾತ್ ಅವರಿಗೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. 
 

Share this Story:

Follow Webdunia kannada