Webdunia - Bharat's app for daily news and videos

Install App

ರೋಮ್ಯಾಂಟಿಗ್ ಆಗಿ ಹೆಜ್ಜೆ ಹಾಕಿದ ಭವ್ಯಾ ತ್ರಿವಿಕ್ರಮ್: ಆಸೆ ನೆರವೇರಿಸಿದ್ದಕ್ಕೆ ಥ್ಯಾಂಕ್ಸ್‌ ಎಂದ ಫ್ಯಾನ್ಸ್‌

Sampriya
ಶುಕ್ರವಾರ, 15 ನವೆಂಬರ್ 2024 (19:19 IST)
Photo Courtesy X
ದೊಡ್ಮನೆಗೆ ಈ ವಾರದ ಮಧ್ಯದಲ್ಲಿ ರಾಮಾಚಾರಿ ಹಾಗೂ ಚಾರು ಜೋಡಿ ಎಂಟ್ರಿಯಾಗಿದ್ದು, ಇವರನ್ನು ಮನರಂಜಿಸಲು ಸ್ಪರ್ಧಿಗಳು ಡ್ಯಾನ್ಸ್‌ ಮಾಡಿ ಒಳ್ಳೆಯ ಮನರಂಜನೆ ನೀಡಿದ್ದಾರೆ. ಇನ್ನೂ ಈ ವಾರ ಜೋಡಿ ಆಟ ಇದ್ದಿದ್ದರಿಂದ ಜೋಡಿಯಾಗಿಯೇ ಸ್ಪರ್ಧಿಗಳು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ.

ಚಾರು ಹಾಗೂ ರಾಮಾಚಾರಿ ಇಬ್ಬರಿಗೆ ಈ ಟಾಸ್ಕ್‌ನ ತೀರ್ಪುಗಾರಿಕೆ ಹೊಣೆ ಕೂಡಾ ನೀಡಲಾಗಿದೆ. ಮೋಕ್ಷಿತಾ-ಧನರಾಜ್‌ ಆಚಾರ್‌, ಹನುಮಂತ-ಗೌತಮಿ ಜಾದವ್‌, ಚೈತ್ರಾ ಕುಂದಾಪುರ-ಶಿಶಿರ್‌ ಶಾಸ್ತ್ರಿ, ಐಶ್ವರ್ಯ ಶಿಂಧೋಗಿ-ಧರ್ಮ ಕೀರ್ತಿರಾಜ್‌, ತ್ರಿವಿಕ್ರಮ್‌-ಭವ್ಯಾಗೌಡ ಹೀಗೆ ಜೋಡಿಯನ್ನಾಗಿ ಮಾಡಲಾಗಿದೆ.‌

ಕಲರ್ಸ್‌ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಐಶ್ಚರ್ಯ- ಧರ್ಮ ಇಬ್ಬರೂ ವಿಕ್ರಾಂತ್‌ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್‌ ಮಾಡಿದರೆ, ಚೈತ್ರಾ ಕುಂದಾಪುರ ಹಾಗೂ ಶಿಶಿರ್‌ ಇಬ್ಬರೂ ಮುತ್ತಣ್ಣ ಚಿತ್ರದ ಮುತ್ತಣ್ಣ ಪೀಪಿ ಊದುವ ಹಾಡಿಗೆ ಡ್ಯಾನ್ಸ್‌ ಮಾಡಿದ್ದು, ರಾಮಾಚಾರಿ ಹಾಗೂ ಚಾರು ಇಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದಿನ ಎಪಿಸೋಡ್‌ನಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಭವ್ಯಾ- ತ್ರಿವಿಕ್ರಮ್ ಅವರು ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ಹಾಡಿಗೆ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ.  ಇದನ್ನು ನೋಡಿದ ಭವ್ಯ, ತ್ರಿವಿಕ್ರಮ್ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕೊನೆಗೂ ಕಾದು ಕುಳಿತಿದ್ದಕ್ಕೂ ಸಾರ್ಥಕವಾಯಿತು ಎಂದಿದ್ದಾರೆ.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

₹100ಕೋಟಿ ಕ್ಲಬ್ ಸೇರುತ್ತಾ, ಮತ್ತೊಂದು ಹೊಸ ದಾಖಲೆ ಮಾಡಿದ ಸು ಫ್ರಮ್ ಸೋ

ಮನೆ ಮೇಲೆ ಗುಂಡಿನ ದಾಳಿ ಬಳಿಕ ಮೊದಲ ಬಾರೀ ಪ್ರತಿಕ್ರಿಯಿಸಿದ ಎಲ್ವಿಶ್ ಯಾದವ್‌

ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಪೋಸ್ಟ್ ಹಂಚಿಕೊಂಡ ನಟಿ ರಮ್ಯಾ

ಮುಂದಿನ ಸುದ್ದಿ
Show comments