Webdunia - Bharat's app for daily news and videos

Install App

ಬೆಂಗಳೂರು ಕಂಬಳ: ಇಂದು, ನಾಳೆ ಬರಲಿರುವ ಸ್ಟಾರ್ ನಟ-ನಟಿಯರು

Webdunia
ಶನಿವಾರ, 25 ನವೆಂಬರ್ 2023 (09:00 IST)
Photo Courtesy: Twitter
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳ ಆಯೋಜಿಸಲಾಗಿದೆ. ಇದಕ್ಕೆ ಸಿನಿ ಕಲಾವಿದರ ದಂಡೇ ಹರಿದುಬರುವ ನಿರೀಕ್ಷೆಯಿದೆ.

ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು, ಇದಕ್ಕಾಗಿ ಮೊನ್ನೆಯೇ ಕಂಬಳದ ಕೋಣಗಳು ಬಂದಿಳಿದಿವೆ. ಇಂದು ಮತ್ತು ನಾಳೆ ಕಂಬಳ ಉತ್ಸವ ನಡೆಯಲಿದ್ದು, ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ. ಕಂಬಳದ ಜೊತೆಗೆ ಕರಾವಳಿ ಸಂಸ್ಕೃತಿ, ಆಹಾರದ ಅನಾವರಣವೂ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ವಿವಿಧ ಭಾಷೆಯ ಸಿನಿ ಕಲಾವಿದರಿಗೆ ಆಹ್ವಾನ ನೀಡಲಾಗಿದೆ. ಹೀಗಾಗಿ ಕಂಬಳ ಉತ್ಸವಕ್ಕೆ ತಾರಾ ಮೆರುಗು ಬರಲಿದೆ.

ಬಾಲಿವುಡ್ ತಾರೆಯರಾದ ವಿವೇಕ್ ಓಬೇರಾಯ್, ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಆಗಮಿಸುವ ನಿರಿಕ್ಷೆಯಿದೆ. ಇನ್ನು ಸ್ಯಾಂಡಲ್ ವುಡ್ ಕಲಾವಿದರಾದ ಉಪೇಂದ್ರ, ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ದರ್ಶನ್, ರಮೇಶ್ ಅರವಿಂದ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಭಾಗಿಯಾಗಲಿದ್ದಾರೆ. ಇವರಲ್ಲದೆ ಕರಾವಳಿ ಮೂಲದ ಟಾಲಿವುಡ್ ತಾರೆಯರಾದ ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿಗೂ ಆಹ್ವಾನ ನೀಡಲಾಗಿದೆ. ಕ್ರಿಕೆಟಿಗ ಕೆಎಲ್ ರಾಹುಲ್ ಗೂ ಆಹ್ವಾನ ನೀಡಲಾಗಿದ್ದು, ಅವರು ಆಗಮಿಸುತ್ತಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಒಟ್ಟಾರೆ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಕರಾವಳಿ ಹಬ್ಬದ ಜೊತೆಗೆ ಮೆಚ್ಚಿನ ತಾರೆಯರನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮುಂದಿನ ಸುದ್ದಿ
Show comments