Select Your Language

Notifications

webdunia
webdunia
webdunia
webdunia

ಬೆಳ್ಳಿ ಚಿತ್ರದ ವಿಮರ್ಶೆ: ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾದ ಶಿವಣ್ಣ

ಬೆಳ್ಳಿ ಚಿತ್ರದ ವಿಮರ್ಶೆ: ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾದ ಶಿವಣ್ಣ
, ಶುಕ್ರವಾರ, 31 ಅಕ್ಟೋಬರ್ 2014 (18:10 IST)
ಹ್ಯಾಟ್ರಿಕ್ ಸ್ಟಾರ್ ಶಿವಣ್ಣ ಲಾಂಗ್ ಮಚ್ಚುಗಳಿಂದ ದೂರವಾಗಿದ್ದಾರೆ ಎನ್ನುವ ಅನಿಸಿಕೆ ಮರೆಯಾಗುವ ಮುನ್ನವೇ ದುತ್ತೇಂದು ಬೆಳ್ಳಿ ಚಿತ್ರದಲ್ಲಿ ಮತ್ತೆ ಲಾಂಗ್ ಹಿಡಿದು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.ಚಿತ್ರದಲ್ಲಿ ಎಲ್ಲಾ ಚಿತ್ರಗಳಂತೆ ರೌಡಿಸಂ ಕಂಡು ಬಂದರೂ ನಿರ್ದೇಶಕರ ಸರಳ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. 
 
ಬೆಳ್ಳಿ ಚಿತ್ರದಲ್ಲಿ ಶಿವಣ್ಣ ನಿರೀಕ್ಷೆಯಂತೆ ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಚಿತ್ರದ ಆರಂಭದಿಂದ ಅಂತ್ಯದವರೆಗೆ ಬೆಳ್ಳಿ ಪಾತ್ರದಲ್ಲಿ ಶಿವಣ್ಣ ಭರ್ಜರಿಯಾಗಿ ಮಿಂಚಿದ್ದಾರೆ ಎನ್ನಬಹುದು.  
 
ಪದವೀಧರನಾದ ಬೆಳ್ಳಿ(ಶಿವರಾಜ್‌ಕುಮಾರ್) ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾನೆ. ಉದ್ಯೋಗಕ್ಕಾಗಿ ಅಲೆಯುತ್ತಿರುವಾಗಲೇ ನಡೆದ ಕೆಲ ಅಹಿತಕರ ಘಟನೆಗಳಿಂದಾಗಿ ಬೆಳ್ಳಿ(ಬಸವರಾಜ) ಭೂಗತಲೋಕಕ್ಕೆ ಕಾಲಿಡುವಂತಾಗುತ್ತದೆ. ಮತ್ತೆ ಲಾಂಗ್ ಮಚ್ಚುಗಳ ಅರ್ಭಟ ಆರಂಭ.  
 
ಸರಳವಾದ ಕಥೆಗೆ ಹೊಸತೊಂದು ಟ್ವಿಸ್ಟ್ ನೀಡಿದ ನಿರ್ದೇಶಕ ಮಹೇಶ್ ಬೆಳ್ಳಿಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮನಟನೆಯ ಸಂಪೂರ್ಣ ಅನುಭವವನ್ನು ಚಿತ್ರಕ್ಕಾಗಿ ಧಾರೆಯರೆದಿದ್ದಾರೆ. 

ಬುಕ್ ಮೈ ಶೋ ಗಾಗಿ ಇಲ್ಲಿ ಕ್ಲಿಕ್ಕಿಸಿ
 
ಪದವೀಧರನಾಗಿ ಜನಾನುರಾಗಿಯಾಗಿದ್ದ ಬೆಳ್ಳಿ ಯಾಕೆ ಹುಚ್ಚನಾದ ಎನ್ನುವ ಹಿನ್ನಲೆ ನಿಮ್ಮನ್ನು ಕಾಡದಿರದು. ಚಿತ್ರದ ನಿರ್ದೇಶಕರ ಕೈಚಳಕ,ಅತ್ಯುತ್ತಮ ಛಾಯಾಗ್ರಹಣ, ಸರಳ ನಿರೂಪಣೆ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಶಿವಣ್ಣ ಅವರ ಹುಚ್ಚನ ಪಾತ್ರರ್ ನೋಡಿದಾಗ ಅವರ ಹಿಂದಿನ ಜೋಗಿ ಮತ್ತು ಓಂ ಚಿತ್ರಗಳು ನೆನಪು ನಿಮ್ಮನ್ನು ಕಾಡದಿರದು.  
 
ಬೆಳ್ಳಿ(ಶಿವಣ್ಣ) ತಾಯಿಯಾಗಿ ಹಿರಿಯ ನಟಿ ಪದ್ಮಾ ವಾಸಂತಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಮಗ ಎಲ್ಲಿ ಕಾಣೆಯಾದ ಎಂದು ಅರಸುತ್ತಾ ಕಣ್ಣೀರಧಾರೆ ಸುರಿಸಿ ಮಹಿಳಾ ಪ್ರೇಕ್ಷಕರ ಮನಗೆಲ್ಲುತ್ತಾರೆ.ಶಿವಣ್ಣ ಹುಡುಕಾಟದಲ್ಲಿರುವ ಕಥೆಗಾರ್ತಿ ಅನುಭವಿ ನಟಿ ಸುಧಾರಾಣಿ ತಮಗೆ ಒದಗಿಸಿದ ಪಾತ್ರದಲ್ಲಿ ಮಿಂಚಿದ್ದಾರೆ.   
 
ಬೆಳ್ಳಿಯ ಜೊತೆ ಬಳುಕುವ ಬಳ್ಳಿ ಕೃತಿ ಕರಬಂಧ ಚಿತ್ರದಲ್ಲಿ ಶಿವಣ್ಣ ಬೆಳ್ಳಿಯಾಗಿ ಮಿಂಚಿದರೆ ಕೃತಿ ಕರಬಂಧ ಬಳುಕುವ ಬಳ್ಳಿ ಎನ್ನಬಹುದು. ಬೆಳ್ಳಿಯ ಹಿಂದೆ ಸುತ್ತವ ಸ್ನೇಹಾ ಆಗಿಯಷ್ಟೇ ಅವರ ಪಾತ್ರ ಉಳಿದುಹೋಗಿದೆ. ಗ್ಲಾಮರ್ ಗೊಂಬೆಯಂತೆ ಅಲ್ಲದೆ ಲಕ್ಷಣವಾದ ಗೊಂಬೆಯಂತೆ ಅವರ ಪಾತ್ರ ಮೂಡಿಬಂದಿದೆ.

                                                                 ಬುಕ್ ಮೈ ಶೋಗಾಗಿ ಇಲ್ಲಿ ಕ್ಲಿಕ್ಕಿಸಿ 
 
ನಾಯಕ ಶಿವಣ್ಣ ಜೊತೆಯಲ್ಲಿ ಮಾದಕ ನಟಿ ಕೃತಿ ಕರಬಂದ ಉತ್ತಮವಾಗಿ ನಟಿಸಿದ್ದಾರೆ. ಆದರೆ, ಶಿವಣ್ಣನ ಎದುರು ಮಂಕಾಗಿದ್ದಾರೆ ಎನ್ನಬಹುದಾಗಿದೆ. ಆದರೆ, ದೊರೆತ ಪಾತ್ರದಲ್ಲಿ ನ್ಯಾಯ ಒದಗಿಸಿಕೊಡುವಲ್ಲಿ ಕರಬಂದ ಸೆಕ್ಸಸ್. 
 
ನೆನಪಿನಲ್ಲಿ ಉಳಿಯುವ ಪಾತ್ರಗಳು ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್ ಪ್ರಸಾದ್ ಅವರ ಪಾತ್ರಗಳನ್ನು ಸಮಪ್ರಮಾಣದಲ್ಲಿ ತೂಗಿಸಿಕೊಂಡು ಬಂದಿದ್ದಾರೆ ನಿರ್ದೇಶಕರು. ವೆಂಕಟೇಶ್ ಪ್ರಸಾದ್, ಆದಿ ಲೋಕೇಶ್ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.
 
ಶಿವಣ್ಣನ ಸಹಚರರಾಗಿರುವ ಆದಿ ಲೋಕೇಶ್, ವೆಂಕಟೇಶ್ ಪ್ರಸಾದ್, ವಿನೋದ್ ಪ್ರಭಾಕರ್, ಪ್ರಶಾಂತ್ ತಮ್ಮ ಒಳಗಿನ ಕಲಾವಿದನನ್ನು ಹೊರಹಾಕಿದ್ದಾರೆ. 
 
ಚಿತ್ರಕಥೆ, ಸಂಭಾಷಣೆ, ನಿರ್ದೇಶನ: ಮಹೇಶ್ (ಮುಸ್ಸಂಜೆ ಮಾತು) ಸಂಗೀತ: ವಿ ಶ್ರೀಧರ್ ಛಾಯಾಗ್ರಹಣ: ಕೆ.ಎಸ್.ಚಂದ್ರಶೇಖರ್ ಸಂಕಲನ: ದೀಪು ಎಸ್ ಕುಮಾರ್ ಪಾತ್ರವರ್ಗ: ಶಿವರಾಜ್ ಕುಮಾರ್, ಕೃತಿ ಕರಬಂಧ, ಸುಧಾರಾಣಿ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್ ಪ್ರಸಾದ್, ಆದಿ ಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು ಮುಂತಾದವರು.. ಬೆಳ್ಳಿ ನಿರ್ಮಾಪಕರು: ಹೆಚ್.ಆರ್. ರಾಜೇಶ್ (ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನ) 

ರೇಟಿಂಗ್ : 3/5

Share this Story:

Follow Webdunia kannada