Select Your Language

Notifications

webdunia
webdunia
webdunia
webdunia

ಯಾರವನು ಹುಡುಗಾ ಪ್ರಿಯಾಮಣಿ ಹೇಳು ಯಾರವ ನಿನ್ನ ಹುಡುಗ ?

ಯಾರವನು ಹುಡುಗಾ ಪ್ರಿಯಾಮಣಿ ಹೇಳು ಯಾರವ ನಿನ್ನ ಹುಡುಗ ?
, ಶನಿವಾರ, 22 ನವೆಂಬರ್ 2014 (10:00 IST)
ಬೆಂಗಳೂರಿನ ಹುಡುಗಿ ಮಲೆಯಾಳಂ ಸುಂದರಿ ಪ್ರಿಯಾ ಮಣಿ ಅಭಿನಯದ ಅಂಬರೀಶ ಬಿಡುಗಡೆ ಆಗಿದೆ. ಕೆಜಿ ರಸ್ತೆಯಲ್ಲಿ ಆ ಚಿತ್ರದ ಪ್ರದರ್ಶನಕ್ಕೆ ಅವಕಾಶ ಸಿಗದೇ ಇದ್ದರು ಸಹಿತ ಅದು ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ನಲ್ಲಿ ಪ್ರದರ್ಶಿತ ಗೊಂಡು  ಜನಮನ ಸೆಳೆದಿದೆ. ಈ ಚಿತ್ರ ಅಲ್ಲದೆ ಪ್ರಿಯಾಮಣಿ ಮಲೆಯಾಳಂ ಭಾಷೆಯ ಚಿತ್ರಗಳಲ್ಲೂ ಸಹಿತ ತನ್ನನ್ನು ತೊಡಗಿಸಿ ಕೊಂಡಿದ್ದಾಳೆ. ತೆಲುಗು ಚಿತ್ರರಂಗ ಅಲ್ಲದೆ ತಮಿಳಿನಲ್ಲೂ ಸಹಿತ ಹೆಸರು ಪಡೆದ ಪ್ರಿಯಾ ಈಗ ಹೆಚ್ಚಾಗಿ ನಟಿಸುತ್ತಿರುವುದು ಕನ್ನಡ ಹಾಗೂ ಮಲೆಯಾಳಂ ನಲ್ಲಿ.

ಇದರ  ಮಧ್ಯೆ ಆಕೆಯ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿತ್ತು-ಹರಡಿವೆ.ಆದರೆ ಆಕೆಯ ಮನದಲ್ಲಿ ಯಾರಿದ್ದಾರೆ, ಯಾರ್ಯಾರು ಇದ್ದಾರೆ ಎನ್ನುವ ಸಂಗತಿ ಸದ್ಯಕ್ಕೆ ತಿಳಿದಿಲ್ಲ. ಏಕೆಂದರೆ ಈವರೆಗೂ ಪ್ರಿಯಾ ಬಗ್ಗೆ ಹರಡಿರುವ ಸುದ್ದಿಯಲ್ಲಿ ಬಾಯ್ ಫ್ರೆಂಡ್ ಮತ್ತು  ಮದುವೆ ವಿಷಯದಲ್ಲಿ ಮಾತ್ರ ಇನ್ನು ಗುಟ್ಟು ರಟ್ಟಾಗಿಲ್ಲ. ಆಕೆ ಮಲೆಯಾಳಂ ನಟ ಪದ್ಮ ಸೂರ್ಯ ಅವರ ಜೊತೆ ಪ್ರೀತಿ ಮಾಡ್ತಾ ಇದ್ದಾಳೆ , ಅವರೊಂದಿಗೆ ಸಂಬಂಧ ಇದೆ ಹಾಗೆ ಹೀಗೆ ಎಂದೆಲ್ಲ ಸುದ್ದಿ ಹರಡಿದ್ದರು ಸಹಿತ ಈ ಬಗ್ಗೆ ಆಕೆ ಏನು ಹೇಳಿ ಇರಲಿಲ್ಲ. 
 
ಪದ್ಮ ಸೂರ್ಯ ಜೊತೆ ಆಕೆ ಹೆಚ್ಚು ಕ್ಲೋಸ್ ಆಗಿದ್ದಾಳೆ ಎಂದು ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿ ಊಹೆಗೆ ಆಕೆ ಸಿನಿಮಾ ಕಾರ್ಯಕ್ರಮ ಒಂದರಲ್ಲಿ ಫುಲ್ ಸ್ಟಾಪ್  ಇಟ್ಟಿದ್ದಾಳೆ. ಆದರೆ ತಾನು ತನ್ನ ಬದುಕಿನ ಸತ್ಯ ಸಧ್ಯದಲ್ಲೇ ಹೊರ ಹಾಕುವುದಾಗಿ ಹೇಳಿದ್ದಾಳೆ. ಅಂದರೆ ಪ್ರಿಯ ಮನಗೆದ್ದ ಹುಡುಗನ ಬಗ್ಗೆ ಹೇಳುತ್ತಿದ್ದಾಳೆ. ಅಲ್ಲಿ ತನಕ ಊಹೆಗಳನ್ನು ಮಾಡುವ ಕೆಲಸವಷ್ಟೇ ನಮ್ಮದು !

Share this Story:

Follow Webdunia kannada