Select Your Language

Notifications

webdunia
webdunia
webdunia
webdunia

ಧೂಮ್ 3 ಗಳಿಕೆಯನ್ನು ಹಿಂದಿಕ್ಕಿದ ಸಲ್ಮಾನ್ ಖಾನ್ ಭಜರಂಗಿ ಭಾಯ್ಜಾನ್

ಧೂಮ್ 3 ಗಳಿಕೆಯನ್ನು ಹಿಂದಿಕ್ಕಿದ  ಸಲ್ಮಾನ್ ಖಾನ್ ಭಜರಂಗಿ ಭಾಯ್ಜಾನ್
, ಶುಕ್ರವಾರ, 31 ಜುಲೈ 2015 (10:40 IST)
ಸಲ್ಮಾನ್ ಖಾನ್ ಅವರ ಅಭಿನಯದ ಚಿತ್ರ ಭಜರಂಗಿ ಭಾಯ್ಜಾನ್ ಸದ್ದಿಲ್ಲದೇ ಬಾಕ್ಸಾಫೀಸಲ್ಲಿ ಅಪಾರ ಮೊತ್ತವನ್ನು ಗಳಿಕೆ ಮಾಡುತ್ತಿದೆ. ಸಲ್ಮಾನ್ ಖಾ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಈ ಚಿತ್ರ ಇಂಡೋ- ಭಾಕ್ ಸಾಮಾಜಿಕ ಅಂಶಗಳನ್ನು ಒಳಗೊಂಡ ಸಿನಿಮಾ ಆಗಿದೆ. ಈ ಚಿತ್ರ  ಧೂಮ್ 3  ಚಿತ್ರದ ಗಳಿಕೆಯನ್ನು ಹಿಂದಿಕ್ಕುವ ಹಾದಿಯಲ್ಲಿ ಸಾಗಿದೆ. 
ಕಬೀರ್ ಖಾನ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಏಳುವರ್ಷದ  ಹರ್ಷಾಲಿ ಮಲ್ಹೋತ್ರ  ಈ ಚಿತ್ರದ ಮುಖ್ಯ ಆಕರ್ಷಣೆ. ಆಕೆ ಪಾಕಿಸ್ತಾನದ ಹುಡುಗಿ ಪಾತ್ರಧಾರಿಯಾಗಿದ್ದಾಳೆ. ಅವಳ ನಟನೆಯು ಎಲ್ಲರ ಮನ ಸೆಳೆದಿದೆ. ಶಾಂತಿ ಸಂದೇಶ ಸಾರುವ ಅಂಶಗಳನ್ನು ಈ ಚಿತ್ರ ಹೊಂದಿದೆ.  
 
ಸಾಮಾನ್ಯವಾಗಿ ಬಾಲಿವುಡ್ ಖಾನ್ತ್ರಯರು ಬಾಕ್ಸಾಫೀಸಲ್ಲಿ ಗದ್ದಲ ಮಾಡುತ್ತಿರುತ್ತಾರೆ.ಅಮೀರ್  ಖಾನ್ , ಶಾರುಖ್ ಮತ್ತು ಸಲ್ಮಾನ್ ಅವರ ನಡುವೆ ಈ ಸ್ಪರ್ಧೆ ಇದ್ದೆ ಇರುತ್ತದೆ. ಕಳೆದ ವರ್ಷ ಧೂಮ್ 3  ಮಾಡಿದ ಗಳಿಕೆಯನ್ನು ಈಗ ಭಾಯ್ಜನ್ ಹಿಂದೆ ಇಟ್ಟಿದೆ. ಈಗ ಪೀಕೆಯನ್ನು ಹಿಂದಕ್ಕೆ ಅಟ್ಟುವ ಹಾದಿಯಲ್ಲಿ ಸಾಗಿದೆ  ಭಾಯ್ಜಾನ್. 

Share this Story:

Follow Webdunia kannada