Webdunia - Bharat's app for daily news and videos

Install App

ರಾಜಮೌಳಿ ಅವರ ಬಾಹುಬಲಿ ಚೀನಾ ಭಾಷೆಗೂ ಡಬ್ಬಿಂಗ್

Webdunia
ಗುರುವಾರ, 30 ಜುಲೈ 2015 (10:21 IST)
ರಾಜಮೌಳಿ ಅವರ ಬಾಹುಬಲಿ-1 ಭಾರತ ದೇಶದಲ್ಲಿ ಬಿಡುಗಡೆಯಾಗಿ ಸಾಕಷ್ಟು ಹೆಸರು ಹಣ ಎರಡನ್ನು ಗಳಿಸಿತು. ಈಗ ಅದು ಭಾರತದ ಜೊತೆಗೆ ವಿಶ್ವದೆಲ್ಲೆಡೆ ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಅಷ್ಟೇ ಅಲ್ಲದೆ ಈ ಚಿತ್ರ ಇನ್ನು ಗಳಿಕೆ ಮಾಡುತ್ತಲೇ ಸಾಗಿದೆ. ಈ ಒಂದು ಮನೋರಂಜನೀಯ ಕಥಾಹಂದರದ ಫ್ಯಾಂಟಸಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕ ಪ್ರಭುಗಳ ಮನ ತಣಿಸಿದ ರಮ್ಯಕೃಷ್ಣ, ಸತ್ಯರಾಜ್ ರಂತಹ ಅಪರೂಪದ ಕಲಾವಿದರು ಇನ್ನು ಬಾಹುಬಲಿ ಚಿತ್ರದ ಮೂಲಕ ಚೀನಾ ಭಾಷೆ ಮಾತನಾಡಲಿದ್ದಾರೆ. ಈ ಸಂಗತಿ ಬಗ್ಗೆ ವಿವರವಾಗಿ ಹೇಳುವುದಾದರೆ ಈ ಚಿತ್ರ ಈಗ ಚೀನಾ ಭಾಷೆಗೆ ಡಬ್ಬಿಂಗ್ ಆಗಲಿದೆ. ಸಾಮಾನ್ಯವಾಗಿ ಭಾರತದ ಸಿನಿಮಾಗಳು ಚೀನಾ ದೇಶದಲ್ಲಿ ಅದೇ ಭಾಷೆಯಲ್ಲಿ ಡಬ್ಬಿಂಗ್ ಆಗಿ ಪ್ರದರ್ಶಿತವಾಗುತ್ತದೆ. ಈಗ ಬಾಹುಬಲಿ ಆ ಸ್ಥಾನ ಪಡೆದಿದೆ. 
ಅನುಷ್ಕ, ಪ್ರಭಾಸ್, ರಾಣ ಮುಂತಾದವರು ನಟಿಸಿರುವ ಈ ಚಿತ್ರದ ಚೀನಾ ವರ್ಶನ್ ನ್ನು ವಿನ್ಸೆಂಟ್ ತಾಲಿಬಾನ್ ಅವರು ಎಡಿಟ್ ಮಾಡುತ್ತಿದ್ದಾರೆ. ದಿ ಇನ್ಕ್ರೆಡಿಬಲ್ ಹಲ್ಕ್, ಕ್ಲಾಶ್ ಆಫ್ ದ ಟೈಟಾನ್ಸ್ ಚಿತ್ರಗಳು ಇವರ ಕೈ ಚಳಕದಿಂದ ಹೊರ ಬಂದಿದೆ. ಈಗ ಬಾಹುಬಲಿ ಇವರ ಕೈಗೆ ಸಿಕ್ಕಿದೆ. ಅಕ್ಟೋಬರ್ ತಿಂಗಳಲ್ಲಿ ಈ ಚಿತ್ರ ಚೀನಾ ಭಾಷಿಗರ ಮುಂದೆ ಬರಲಿದೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments