Webdunia - Bharat's app for daily news and videos

Install App

"ಯೇ ಹೈ ಇಂಡಿಯಾ' ಚಿತ್ರದಿಂದ ಬಾಲಿವುಡ್‌ಗೆ ಬಾಬಾ ರಾಮದೇವ್ ಪಾದಾರ್ಪಣೆ

Webdunia
ಬುಧವಾರ, 9 ಆಗಸ್ಟ್ 2017 (18:44 IST)
ಯೋಗಾ ಗುರು ಬಾಬಾ ರಾಮದೇವ್ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯೇ ಹೈ ಇಂಡಿಯಾ ಚಿತ್ರಕ್ಕೆ ಪ್ರಚಾರ ನೀಡುವುದರೊಂದಿಗೆ ಸೈಯಾನ್ ಸೈಯಾನ್ ಎನ್ನುವ ಹಾಡಿನಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯೇ ಹೈ ಇಂಡಿಯಾ ಚಿತ್ರದ ಸಾಹಿತ್ಯ ಮತ್ತು ನಿರ್ದೇಶನದ ಹೊಣೆಯನ್ನು ಲೋಮ್ ಹರ್ಷ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಾವೈ ಚಹಾಲ್ ಮತ್ತು ಡಿಯಾನಾ ಉಪ್ಪಲ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
 
ಕೋಟ್ಯಾಂತರ ಜನಸಂಖ್ಯೆಯನ್ನು ಹೊಂದಿದ ದೇಶ, ವೇದಗಳನ್ನು ಕಂಡುಹಿಡಿದ ದೇಶ; ಈ ದೇಶದ ಬಗ್ಗೆ ವಿಶ್ವದಲ್ಲಿ ಕೆಲವರಿಗೆ ತಪ್ಪು ದೃಷ್ಟಿಕೋನವಿದೆ, ಭಾರತವು ಕೇವಲ ಹಾವಾಡಿಗರ ದೇಶವಲ್ಲ. ಇದು ಮುಂದುವರಿದ ರಾಷ್ಟ್ರವಾಗಿದೆ ಎಂದು ಬಾಬಾ ರಾಮದೇವ್ ತಿರುಗೇಟು ನೀಡಿದ್ದಾರೆ.
 
"ಇಡೀ ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ, ಈ ಬದಲಾವಣೆಯನ್ನು 'ಯೇ ಹೈ ಇಂಡಿಯಾ' ಚಿತ್ರದಲ್ಲಿ ಪ್ರದರ್ಶಿಸಲಾಗಿದೆ. ಆದ್ದರಿಂದ ಬಹಳಷ್ಟು ಚಿಂತನೆಯ ನಂತರ ನಾನು ಈ ಚಿತ್ರಕ್ಕೆ ಬಲವಾಗಿ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಭಾರತದ ಪ್ರತಿಯೊಬ್ಬ ನಾಗರಿಕರೂ ಬೆಂಬಲಿಸುತ್ತಾರೆ ಎಂದು ನಿರೀಕ್ಷಿಸುವುದಾಗಿ ಹೇಳಿದ್ದಾರೆ.
 
"ನನ್ನ ಚಿತ್ರಕ್ಕೆ ಪೂರ್ಣ ಬೆಂಬಲವನ್ನು ನೀಡಿರುವ ಬಾಬಾ ರಾಮದೇವ್‌ಜಿಗೆ ನಾನು ನಿಜವಾಗಿಯೂ ಕೃತಜ್ಞರಾಗಿರುತ್ತೇನೆ, ನಮ್ಮ ಚಿತ್ರಕ್ಕಾಗಿ ನಾವು ಯಾವುದೇ ಉತ್ತಮ ಸಾರ್ವಜನಿಕ ರಾಯಭಾರಿ ದೊರೆತಿರಲಿಲ್ಲ ಎಂದು ಹೇಳಿದರು. ಯೇ ಹೈ ಇಂಡಿಯಾ ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments