Webdunia - Bharat's app for daily news and videos

Install App

ಬಾಹುಬಲಿ 2 ಪೋಸ್ಟರ್ ನಲ್ಲಿ ತಪ್ಪು ಹುಡುಕಿದ ನೆಟ್ಟಿಗರು!

Webdunia
ಮಂಗಳವಾರ, 31 ಜನವರಿ 2017 (12:05 IST)
ಎಸ್.ಎಸ್.ರಾಜಮೌಳಿ ಪ್ರತಿಷ್ಠಿತ ಚಿತ್ರವಾಗಿ ಮೂಡಿಬರುತ್ತಿರುವ ಬಾಹುಬಲಿ 2 ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಬಿಲ್ಲಿಗೆ ಬಾಣ ಹೂಡಿ ನಿಂತಿರುವ ಭಂಗಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
 
ಈ ಪೋಸ್ಟರ್ ನೋಡಿದವರು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈ ಪೋಸ್ಟರ್ ನಲ್ಲಿ ತಪ್ಪು ನುಸುಳಿದೆ ಎಂದು ನೆಟ್ಟಿಗರು ಕಂಡುಹಿಡಿದಿದ್ದಾರೆ. ಇಷ್ಟಕ್ಕೂ ಈ ಪೋಸ್ಟರ್ ನಲ್ಲಿ ಇರುವಂತಹ ತಪ್ಪೇನು ಎಂದರೆ...ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಿಮ್ಮ ಗಮನಕ್ಕೂ ಬರುತ್ತದೆ!
 
ಬಿಲ್ಲನ್ನು ಹಿಡಿದುಕೊಂದು ಅನುಷ್ಕಾ, ಪ್ರಭಾಸ್ ನಿಂತಿದ್ದಾರೆ. ಮುಂದೆ ಅನುಷ್ಕಾ, ಆಕೆಯ ಹಿಂದೆ ಪ್ರಭಾಸ್ ಬಿಲ್ಲು ಹಿಡಿದಿದ್ದಾರೆ. ಆದರೆ... ಗುರಿ ಇಟ್ಟಿರುವ ಬಾಣಗಳನ್ನು ಒಮ್ಮೆ ಗಮನಿಸಿದರೆ... ಮುಂದೆ ನಿಂತಿರುವ ಅನುಷ್ಕಾ ಬಾಣದ ಮೇಲೆ ಹಿಂದೆ ಬಿಲ್ಲು ಹಿಡಿದು ನಿಂತಿರುವ ಪ್ರಭಾಸ್ ಬಾಣಗಳು ಕಾಣುತ್ತಿವೆ.
 
ಹಿಂದೆ ನಿಂತಿರುವ ಪ್ರಭಾಸ್ ಬಾಣ ಮುಂದೆ ನಿಂತಿರುವ ಅನುಷ್ಕಾ ಬಿಲ್ಲಿನ ಮೇಲೆ ಹೇಗೆ ಬಂದವು? ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ತೆರೆಯ ಮೇಲೆ ಅತ್ಯದ್ಭುತ ದೃಶ್ಯಕಾವ್ಯ ಸೃಷ್ಟಿಸುವ ರಾಜಮೌಳಿ ಈ ಸಣ್ಣ ತಪ್ಪನ್ನು ಯಾಕೆ ಗುರುತಿಸಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ಮುಂದಿನ ಸುದ್ದಿ
Show comments