Webdunia - Bharat's app for daily news and videos

Install App

ಅಭಿನಯ ಸರಸ್ವತಿ ಬಿ ಸರೋಜಾದೇವಿಗೆ ಇಂದು ಅಂತಿಮ ಕ್ರಿಯೆ

Krishnaveni K
ಮಂಗಳವಾರ, 15 ಜುಲೈ 2025 (08:39 IST)
ಬೆಂಗಳೂರು: ನಿನ್ನೆ ನಮ್ಮನ್ನಗಲಿದ ಅಭಿನಯ ಸರಸ್ವತಿ ಬಿ ಸರೋಜಾದೇವಿಗೆ ಇಂದು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

ನಿನ್ನೆ ಮಲ್ಲೇಶ್ವರದ ತಮ್ಮ ಸ್ವ ಗೃಹದಲ್ಲಿ ಬಿ ಸರೋಜಾದೇವಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಬಳಿಕ ಮಲ್ಲೇಶ್ವರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸರೋಜಾದೇವಿ ಹುಟ್ಟೂರು  ಚನ್ನಪಟ್ಟಣದ ದಶಾವರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಲ್ಲಿ ಸರೋಜಾದೇವಿಯವರ ತೋಟದಲ್ಲೇ ಅಂತಿಮ ಕ್ರಿಯೆ ನಡೆಸಲಾಗುತ್ತದೆ. ಸರೋಜಾದೇವಿ ಮೂಲತಃ ಒಕ್ಕಲಿಗ ಸಮುದಾಯದವರು. ಹೀಗಾಗಿ ಅವರ ಅಂತಿಮ ಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದೆ.

ಇದೇ ತೋಟದಲ್ಲಿ ಅವರ ತಾಯಿಯ ಸಮಾಧಿ ಪಕ್ಕದಲ್ಲೇ ತಾನೂ ಚಿರನಿದ್ರೆಗೆ ಜಾರಬೇಕೆನ್ನುವುದು ಅವರ ಕೊನೆಯಾಸೆಯಾಗಿತ್ತು. ಅದರಂತೆ ಅಮ್ಮನ ಸಮಾಧಿ ಪಕ್ಕದಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಸಾಕಷ್ಟು ಗಣ್ಯರು ಆಗಮಿಸುವ ನಿರೀಕ್ಷೆಯಿದೆ. ಇದಕ್ಕಾಗಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಸರೋಜಾದೇವಿ ಪಂಚಭಾಷಾ ನಟಿಯಾಗಿದ್ದು ಅವರ ಅಗಲುವಿಕೆಗೆ ಬಹುಭಾಷಾ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಜ್‌ಕುಮಾರ್‌, ಪುನೀತ್ ಹಾದಿಯಲ್ಲೇ ನಡೆದ ಸರೋಜಾ ದೇವಿ, ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ

ಮುಂದಿನ ಸುದ್ದಿ
Show comments