ಟ್ರೇಲರ್‌ನಲ್ಲಿ ಸದ್ದು ಮಾಡ್ತಿದೆ ಅಯ್ಯೋ ರಾಮ ಸಿನೆಮಾ....ಯುಟ್ಯೂಬ್‌ನಲ್ಲಿ ಸಕತ್ ಸೌಂಡು

Webdunia
ಗುರುವಾರ, 26 ಜುಲೈ 2018 (13:35 IST)
ಇತ್ತೀಚಿಗೆ ಸ್ಯಾಂಡಲ್‌ವೂಡ್‌ನಲ್ಲಿ ಹೊಸಬರ ಸಿನೇಮಾಗಳು ಒಂದರ ಹಿಂದೆ ಒಂದರಂತೆ ಬರ್ತಾ ಇದೆ, ಇದಕ್ಕೆ ಮತ್ತೊಂದು ಸೇರ್ಪಡೆ ಅಂದರೆ ಅಯ್ಯೋರಾಮ ಚಿತ್ರ. ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ ಇದಾಗಿದ್ದು ಈ ಸಿನಿಮಾದ ಟ್ರೇಲರ್ ಯುಟ್ಯೂಬ್‌ನಲ್ಲಿ ಸಕತ್ ಸೌಂಡು ಮಾಡ್ತಾ ಇದೆ.

ಅಷ್ಟೇ ಅಲ್ಲ ಟ್ರೇಲರ್‌ಗೆ ಜನರಿಂದ ಒಳ್ಳೆ ಪ್ರತಿಕ್ರಿಯೆಯು ಕೂಡಾ ವ್ಯಕ್ತವಾಗ್ತಿದೆ ಅಲ್ಲದೇ ಡ್ರಾಮಾ ಮತ್ತು ಕಾಮಿಡಿಯನ್ನು ಸಹ ನೀವು ಚಿತ್ರದಲ್ಲಿ ಕಾಣಬಹುದಾಗಿದೆ. ಶೇಷನ್​ ಪದ್ಮನಾಭನ್​​, ಪ್ರಿಯಾಂಕ ಸುರೇಶ್​ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರದೀಪ್​ ಪೂಜಾರಿ, ಜಹಂಗೀರ್​, ರಾಕ್​ಲೈನ್​ ಸುಧಾಕರ್​,ಕರಿಸುಬ್ಬು, ಪ್ರಣಯಮೂರ್ತಿ ಮುಂತಾದ ತಾರಾಗಣ ಈ ಚಿತ್ರದಲ್ಲಿದೆ. ಶ್ರೀ ಕೃಪೆ ಲಾಂಚನದಲ್ಲಿ ತ್ರಿವಿಕ್ರಮ್​ ರಘು ಸಿನಿಮಾ ನಿರ್ಮಾಣ ಮಾಡಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಗೀತೆ ರಚನೆ ಮತ್ತು ನಿರ್ದೇಶನದ ಹೊಣೆಯನ್ನು ಆ ವಿನೋದ್‌ಕುಮಾರ್ ಹೊತ್ತಿದ್ದಾರೆ.
ಸಿನಿಮಾದ ವಿಶೇಷವೇನು?
ಈಗಾಗಲೇ ಸಾಕಷ್ಟು ಹಳ್ಳಿ ಆಧಾರಿತ ಸಿನೇಮಾಗಳನ್ನು ನೀವು ನೋಡಿರ್ತಿರಾ, ಆದ್ರೆ ಈ ಸಿನಿಮಾ ಅವೆಲ್ಲವುಗಳಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಚಿತ್ರತಂಡ. ಇದೊಂದು ಕಾಮಿಡಿ ಹಾಗೂ ಥ್ರಿಲ್ಲರ್​ ಸಿನಿಮಾ ಆಗಿರೋದ್ರಿಂದ ಹೊಸದಾಗಿ ಏನನ್ನಾದರೂ ಈ ಸಿನಿಮಾದಲ್ಲಿ ಪ್ರೇಕ್ಷಕರು ನಿರೀಕ್ಷಿಸಬಹುದಾಗಿದೆ.

ವಿವೇಕ್ ಚಕ್ರವರ್ತಿ ಈ ಸಿನಿಮಾಕ್ಕೆ ಸಂಗೀತವನ್ನು ಕಂಪೋಸ್ ಮಾಡಿದ್ದು, ಶ್ಯಾಮ್ ಸಿಂಧನೂರ್ ಈ ಸಿನಿಮಾಕ್ಕೆ ಅದ್ಭುತ ಕ್ಯಾಮರಾ ಕೈಚಳಕ ತೋರಿದ್ದಾರೆ ಎನ್ನಬಹುದು. ಅಲ್ಲದೇ ಚಿತ್ರದ ಮೇಕಿಂಗ್ ಕೂಡಾ ಉತ್ತಮವಾಗಿರೋ ಕಾರಣ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಬಹುದು. ಹೊಸಬರ ಈ ಪ್ರಯತ್ನ ಸಿನೀಮಾ ಪ್ರಿಯರಿಗೆ ಇಷ್ಟವಾಗುತ್ತಾ ಇಲ್ಲ ಎನ್ನೋದು ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ.
 
Ayyo Rama Official Trailer Link - https://youtu.be/2CQ5NZiO7rY

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಮುಂದಿನ ಸುದ್ದಿ
Show comments