Select Your Language

Notifications

webdunia
webdunia
webdunia
webdunia

ಇಲಿಯಾನ ಮನಗೆದ್ದ ಆಸ್ಟ್ರೇಲಿಯಾ ಸುಂದರ ಆಂಡ್ರೂ...?!

ಇಲಿಯಾನ ಮನಗೆದ್ದ ಆಸ್ಟ್ರೇಲಿಯಾ ಸುಂದರ ಆಂಡ್ರೂ...?!
, ಶನಿವಾರ, 25 ಏಪ್ರಿಲ್ 2015 (09:56 IST)
ಗೋವಾದ ಮುದ್ದು ಚೆಲುವೆ ಇಲಿಯಾನ. ಆಕೆ ತನ್ನ ಪ್ರೀತಿಗಾಗಿ ಗಡಿ ಮೀರಿದ್ದಾಳೆ. ಟಾಲಿವುಡ್ ಹಾಗೂ ಬಾಲಿವುಡ್ ಸ್ಟಾರ್‌ಗಳು ಯಾರು ಬಹುಶಃ ಆಕೆಯ ಕಣ್ಣಿಗೆ ಕಾಣಲೇ ಇಲ್ಲ ಎಂದು ಕಾಣುತ್ತದೆ. ಆಕೆ ಆಸ್ಟ್ರೇಲಿಯಾದ ಸುಂದರ ಆಂಡ್ರೂ ನಿಬೋನ್ಪೈಯತ್ತ ಮನ ಕೊಟ್ಟಿದ್ದಾಳೆ. 
ನನ್ನ ಮನಗೆದ್ದ ಸುಂದರ ಆಸ್ಟ್ರೇಲಿಯ ಹುಡುಗಾ ಎಂದು ಖುಷಿಯಿಂದ ಭಾರತೀಯ ಅಭಿಮಾನಿಗಳು ಹಾಗೂ ಚಿತ್ರರಂಗದವರ ಮುಂದೆ ಹೇಳುತ್ತಿದ್ದಾಳೆ. ಸಮಯ ದೊರಕಿದಾಗಲೆಲ್ಲಾ ಆಸಿಸ್‌ಗೆ ಹೋಗಿ ಬರುತ್ತಿದ್ದಾಳೆ ಎನ್ನುವ ಸುದ್ದಿಯನ್ನು ಆಂಗ್ಲ ಪತ್ರಿಕೆಯೊಂದು ತಿಳಿಸಿವೆ.ಆಂಡ್ರೂ ಜೊತೆ ಹೆಚ್ಚು ಕ್ಲೋಜ್ ಆಗಿರುವ ಈಕೆ ಆ ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹರಿ  ಬಿಟ್ಟಿದ್ದಾಳೆ.  
 
ಈಗ ಈ ಜೋಡಿ ಬಗ್ಗೆ ಬಗೆಬಗೆಯ ಕಥೆಗಳು ಹುಟ್ಟಿಕೊಂಡಿವೆ. ಕೆಲವು ವೆಬ್ ಸೈಟ್ಗಳು ಇವರು ಮೊದಲು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದು, ಸ್ವಲ್ಪ ದಿನಗಳ ಬಳಿಕ ಮದುವೆಯಾಗುವುದಾಗಿ ಸಾರುತ್ತಿವೆ. ಆದ್ರೆ ಇವೆಲ್ಲದರ ನಡುವೆ ಇಲಿಯಾನ ಮಾಧ್ಯಮಗಳ ಮುಂದೆ ಆಂಡ್ರೂ ತನ್ನ ಬೆಸ್ಟ್ ಫ್ರೆಂಡ್ ಎಂದು ಸರಳವಾಗಿ ಹೇಳಿದ್ದಾಳೆ. ಪ್ರಿಯ ಓದುಗರೇ ನಂಬೋದು-ಬಿಡೋದು ನಿಮಗೆ ಸೇರಿದ್ದು. 

Share this Story:

Follow Webdunia kannada