Select Your Language

Notifications

webdunia
webdunia
webdunia
webdunia

ಪುಲಿ ಸಿನಿಮಾದ ಆಡಿಯೋ ರಿಲೀಸ್

ಪುಲಿ ಸಿನಿಮಾದ ಆಡಿಯೋ ರಿಲೀಸ್
, ಮಂಗಳವಾರ, 4 ಆಗಸ್ಟ್ 2015 (10:41 IST)
ದಕ್ಷಿಣ ಭಾರತದಲ್ಲಿ ಭಾರಿ ನಿರೀಕ್ಷೆಯನ್ನ ಹುಟ್ಟಿಸಿರೋ ಪುಲಿ ಚಿತ್ರದ ಆಡಿಯೋ ರಿಲೀಸ್‌ ಆಗಿದೆ. ಬಾಹುಬಲಿ ಬಳಿಕ ಸೌತ್ ಸಿನಿರಂಗದಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರೋ ಸಿನಿಮಾ ಅಂದ್ರೆ ಅದು ಪುಲಿ. ಮೂವಿಯಲ್ಲಿ ಪ್ರೇಕ್ಷಕನಿಗೆ ಇಷ್ಟವಾಗುವ ಎಲ್ಲಾ ಅಂಶಗಳಿವೆ. ಬರೊಬ್ಬರಿ 120ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿರೋ ಅದ್ಧೂರಿ ಸಿನಿಮಾ. ಇಂಥ ಮೆಗಾ ಸಿನಿಮಾ ಸದ್ಯ ರಿಲೀಸ್ ಹಂತಕ್ಕೆ ಬಂದಿದ್ದು ಅದ್ಧೂರಿಯಾಗಿಯೇ ಆಡಿಯೋ ಬಿಡುಗಡೆ ಮಾಡೋ ಮೂಲಕ ಮತ್ತೊಮ್ಮೆ  ಘರ್ಜಿಸಿದೆ. 
ಪುಲಿ ಚಿಂಬುದೇವನ್‌ ನಿರ್ದೇಶನದಲ್ಲಿ ಮೂಡಿ ಬಂದಿರೋ ದಕ್ಷಿಣ ಭಾರತದ ಮತ್ತೊಂದು ಬಹುತಾರಾಗಣದ ಬಿಗ್ ಬಜೆಟ್ ಸಿನಿಮಾ. ವಿಜಯ್, ಸುದೀಪ್‌, ಶ್ರೀದೇವಿ, ಹನ್ಸಿಕಾ ಮೋಟ್ವಾನಿ, ಶ್ರುತಿಹಾಸನ್‌ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರಕ್ಕೆ ಸೌಥ್‌ ಇಂಡಿಯಾದ ಸೆನ್ಸೇಶಿನಲ್ ಮ್ಯೂಸಿಕ್‌ ಡೈರೆಕ್ಟರ್‌ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಬಹುನಿರೀಕ್ಷಿತ ಚಿತ್ರ ಪುಲಿಗೆ ದೇವಿಶ್ರೀ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪುಲಿ ಆಲ್ಬಂನಲ್ಲಿ ಒಟ್ಟು 5 ಹಾಡುಗಳಿವೆ. ಮತ್ತೊಂದು ಸ್ಪೆಷಾಲಿಟಿ ಅಂದ್ರೆ ವಿಜಯ್ ಮತ್ತು ಶೃತಿ ಹಾಸನ್ ರೋಮ್ಯಾಂಟಿಕ್ ಸಾಂಗ್ ಒಂದಕ್ಕೆ ಖುದ್ದು ದನಿಯಾಗಿದ್ದಾರೆ. 
 
ಪುಲಿ ಚಿತ್ರದಲ್ಲಿ ವಿಜಯ್ ನಾಯಕನಾಗಿ ಕಾಣಿಸಿಕೊಂಡ್ರೆ, ಕನ್ನಡಿಗ ಕಿಚ್ಚ ಸುದೀಪ್‌ ಅಪೋಸಿಟ್ ಕ್ಯಾರೆಕ್ಟರ್ ನಲ್ಲಿ ಮಿಂಚಿದ್ದಾರೆ. ಈಗಾಗ್ಲೇ ಟ್ರೈಲರ್ ನಲ್ಲಿ ವಿಜಯ್ ಗೆ ಕಿಚ್ಚ ಸೆಡ್ಡು ಹೊಡೆದಿದ್ದಾರೆ. ಈಗ ಸಿನಿಮಾದಿಂದ ತೆಲುಗಿನ ಜೊತೆಗೆ ತಮಿಳಿನಲ್ಲೇ ಫೇಮಸ್‌ ಆಗಿದ್ದ ಸುದೀಪ್‌ ಪುಲಿಯಲ್ಲಿ ಹೀರೋಗೆ ಈಕ್ವಲ್‌ ಆಗಿರೋ ವಿಲನ್‌ ರೋಲ್‌ನ ಪ್ಲೇ ಮಾಡಿದ್ದಾರೆ. ಟ್ರೈಲರ್ ನಲ್ಲೇ ಕಿಚ್ಚು ಹಚ್ಚಿರೋ ಕಿಚ್ಚ ಆಡಿಯೋ ರಿಲೀಸ್ ಗೆ ಮಾತ್ರ ಅನಿವಾರ್ಯ ಕಾರಣಗಳಿಂದ ಆಬ್ಸೆಂಟ್ ಆಗಿದ್ರು. ಆದ್ರೆ ಕನ್ನಡಿಗರಿಗೆ ಮಾತ್ರ ಪುಲಿ ಸಿನಿಮಾ ಕಿಚ್ಚನ ಸಿನಿಮಾ ಎಂದೇ ಅನಿಸಿದೆ. ಪುಲಿ ಚಿತ್ರದ ನಾಯಕಿಯರಾಗಿ, ಶ್ರುತಿಹಾಸನ್ ಮತ್ತು ಹನ್ಸಿಕಾ ಮೋಟ್ವಾಣಿ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada