Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ನನ್ನ ಸೌಂದರ್ಯಕ್ಕೆ ಮಾದರಿ: ಆತಿಯಾ ಶೆಟ್ಟಿ

ಐಶ್ವರ್ಯಾ ರೈ ನನ್ನ ಸೌಂದರ್ಯಕ್ಕೆ ಮಾದರಿ: ಆತಿಯಾ ಶೆಟ್ಟಿ
, ಶನಿವಾರ, 10 ಅಕ್ಟೋಬರ್ 2015 (11:48 IST)
ಸಲ್ಮಾನ್ ಖಾನ್ ನಿರ್ಮಾಣದ ಹೀರೋ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಬಂದವರು ನಟಿ ಆತಿಯಾ ಶೆಟ್ಟಿ. ಮೊದಲ ಸಿನಿಮಾದಲ್ಲಿ ಭರವಸೆ ಹುಟ್ಟಿ ಹಾಕಿದ ಈ ಚೆಲುವೆ ನಟ ಸುನೀಲ್ ಶೆಟ್ಟಿ ಪುತ್ರಿ. ಆದ್ರೆ ಈ ಸುಂದರಿಯ ಸೌಂದರ್ಯಕ್ಕೆ ಐಶ್ವರ್ಯಾ ರೈ ಅವರೇ ಮಾದರಿಯಂತೆ.
ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆತಿಯಾ ಶೆಟ್ಟಿ ಈ ರೀತಿ ಹೇಳಿದ್ದಾಳೆ. ಇನ್ನು ತನ್ನ ತ್ವಚೆ ಅಷ್ಟೊಂದು ಸುಂದರವಾಗಿರಲು ಕಾರಮ ಬೇಬಿ ಆಯಿಲ್ ಹಾಗೂ ಪಿಯರ್ಸ್ ಸೋಪ್ ಎಂದಿರುವ ಆತಿಯಾ ನಾನು ಮೇಕಪ್ ತೆಗೆಯಲು ಯಾವಾಗಲೂ ಇದನ್ನೇ ಬಳಸುತ್ತೇನೆ ಎಂದಿದ್ದಾರೆ. ನಾವು ಸೌಂದರ್ಯ ವರ್ಧಕಗಳನ್ನು ಬಳಸೋದರಿಂದ ಎಷ್ಟು ಚೆನ್ನಾಗಿ ಕಾಣುತ್ತೇವೆ ಅನ್ನೋದಕ್ಕಿಂತ ನಾವು ಖುಷಿಯಾಗಿದ್ರೆ ತುಂಬಾ ಚೆನ್ನಾಗಿ ಕಾಣುತ್ತೇವೆ ಅಂತಾ ಆತಿಯಾ ಹೇಳಿದ್ದಾರೆ.
 
ಈಗಾಗಲೇ ಆತಿಯಾ ಶೆಟ್ಟಿ ಅಭಿನಯದ ಮೊದಲ ಸಿನಿಮಾ ಹೀರೋಗೆ ಅಭಿಮಾನಿಗಳಿಂದ ಭರ್ಜರಿ ಪ್ರಶಂಸೆಗಳು ದೊರೆತ್ತಿವೆ. ಸದ್ಯ ಬಾಲಿವುಡ್ ನಲ್ಲಿ ಆತಿಯಾ ಬಗ್ಗೆ ಕೇಳಿ ಬರುತ್ತಿರುವ ಮಾತುಗಳನ್ನು ನೋಡಿದ್ರೆ ಆಕೆಗ ಇನ್ನಷ್ಟು ಸಿನಿಮಾಗಳು ಒಲಿದು ಬರುವ ಲಕ್ಷಣ ಕಾಣುತ್ತಿದೆ.

Share this Story:

Follow Webdunia kannada