Select Your Language

Notifications

webdunia
webdunia
webdunia
webdunia

ಶಂಕರ್ ಮುಂದಿನ ಚಿತ್ರದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ನಟನೆ ?!

ಶಂಕರ್ ಮುಂದಿನ ಚಿತ್ರದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ನಟನೆ ?!
, ಗುರುವಾರ, 2 ಜುಲೈ 2015 (11:24 IST)
ತಮಿಳು ಸೂಪರ್ ಹಿಟ್ ನಿರ್ದೇಶಕ ಶಂಕರ್. ಅವರು ನಿರ್ದೇಶಿಸಿದ ಚಿತ್ರಗಳು ಒಳ್ಳೆಯ ಯಶಸ್ಸು ಗಳಿಸಿಕೊಟ್ಟಿವೆ. ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಶಂಕರ್ ಅವರು ಮಾಡುವ ಕೆಲಸಗಳು ಭಿನ್ನವಾಗಿರುತ್ತವೆ. ವಿಶ್ವವಿಡೀ ಉತ್ತಮ ಅಸ್ತಿತ್ವ ಪಡೆದಿರುವ ನಿರ್ದೇಶಕರೆನ್ನುವ   ಅಗ್ಗಳಿಕೆ ಸಹ ಪಡೆದಿದ್ದಾರೆ. ಅವರ ಮುಂದಿನ ಚಿತ್ರದಲ್ಲಿ ಈಗ ಹಾಲಿವುಡ್ ನಟ ಅರ್ನಾಲ್ಡ್ ಅವರು ನಟಿಸುತ್ತಾರೆ ಎನ್ನುವ ಸುದ್ದಿಗೆ ಹೆಚ್ಚು ಪುಷ್ಟಿ ಸಿಕ್ಕಿದೆ. 
ಶಂಕರ್ ಅವರು ಈಗ ರೋಬೋ ಚಿತ್ರದ ಮುಂದಿನ ಭಾಗದ ತಯಾರಿಕೆಯಲ್ಲಿ ಇದ್ದಾರೆ. ಅದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಖ್ಯ ಪಾತ್ರಧಾರಿ ಆಗಿದ್ದಾರೆ. ಇದರಲ್ಲಿ ಅರ್ನಾಲ್ಡ್ ಅವರು ಸಹ ನಟಿಸಲಿ ಎನ್ನುವ ಆಶಯವನ್ನು ಈ ನಿರ್ದೇಶಕರು ಹೊಂದಿದ್ದಾರೆ. ಅದು ಈಗ ನನಸಾಗುತ್ತಿದೆ. ಹಾಲಿವುಡ್ ನಲ್ಲಿ ಟರ್ಮಿನೇಟರ್ ಚಿತ್ರ ಅಧಿಕ ಬಾರಿ ಮುಂದುವರೆದ ಭಾಗವಾಗಿ ಜನರ ಮುಂದೆಬರುತ್ತಲೇ ಇದೆ. ಆ ಅಂಶದ ಅಡಿಯಲ್ಲಿ ರೋಬೋ ಸಿದ್ಧವಘುತ್ತಿದ್ದು,  ಹಾಲಿವುಡ್ ನಟನಿಗೂ ಸಹಿತ ಕಾಲಿವುಡ್ ಚಿತ್ರದಲ್ಲಿ ನಟಿಸಲು ರೆಡ್ ಕಾರ್ಪೆಟ್ ಹಾಸಿದ್ದಾರೆ. ಒಟ್ಟಾರೆ ಈಗ ಅರ್ನಾಲ್ಡ್ ತಮಿಳು ಭಾಷೆಯಲ್ಲಿ ಮಾತಾಡಿ ಶತ್ರುಗಳ  ಜೊತೆ ಫೈಟ್ ಮಾಡ್ತಾರೆ!

Share this Story:

Follow Webdunia kannada