Select Your Language

Notifications

webdunia
webdunia
webdunia
webdunia

ಅರ್ಜುನ ಬರ್ತಿದ್ದಾನೆ ದಾರಿ ಬಿಡಿ

ಅರ್ಜುನ ಬರ್ತಿದ್ದಾನೆ ದಾರಿ ಬಿಡಿ
, ಬುಧವಾರ, 2 ಸೆಪ್ಟಂಬರ್ 2015 (10:55 IST)
ಡೈನಾಮಿಕ್ ಪ್ರಿನ್ಸ್ ಮಗ ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜನ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗ್ಲೇ ಟ್ರೈಲರ್ ಮೂಲಕ ಸಂಚಲನ ಮೂಡಿಸಿರೋ ಅರ್ಜನ ಇದೇ ತಿಂಗಳು ಬಿಡುಗಡೆಯಾಗಲಿದೆ. ಪಿಸಿ ಶೇಖರ್ ನಿರ್ದೇಶನದ  ಅರ್ಜುನ ಸಿನಿಮಾದಲ್ಲಿ ತಂದೆ ಮಗ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಆದ್ರೆ ಇಲ್ಲಿ ಅಪ್ಪ ಮಗ ಅಪೋಸಿಟ್ ಕ್ಯಾರೇಕ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸ್ರ್ಕೀನ್ ಮೇಲೆ ಹೇಗೆ ಇರಲಿದೆ ಅನ್ನೋದು ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ.
ಪ್ರಜ್ವಲ್ ಗೆ ನಾಯಕಿಯಾಗಿ ಸ್ನಿಗ್ದ ಸುಂದರಿ ಭಾಮಾ ಬಣ್ಣಹಚ್ಚಿದ್ದಾರೆ. ಪ್ರಜ್ವಲ್ ದೇವರಾಜ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿವರೆಗಿನ ಲವರ್ ಬಾಯ್ ಇಮೇಜ್ ನಲ್ಲಿದ್ದ ಪ್ರಜ್ವಲ್ ಈ ಚಿತ್ರದಲ್ಲಿ ರಾ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ತಪ್ಪು ಮಾಡಿದವರಿಗೆ ಅರ್ಜುನ ಯಾವ ಮುಲಾಜಿಲ್ಲದೆ ಶಿಕ್ಷೆ ಕೊಡೋದೆ ಈ ಚಿತ್ರದ ಕಥಾಹಂದರ. ಡೈನಾಮಿಕ್ ಸ್ಟಾರ್ ದೇವರಾಜ್ ತಮ್ಮ ಮಗನ ಸಿನಿಮಾದಲ್ಲಿ ಖಡಕ್ ರೋಲ್ ನಲ್ಲಿ ಮಿಂಚಿದ್ದಾರೆ.
 
ಇನ್ನು ಅರ್ಜುನ್ ಜನ್ಯ ನೀಡಿರೋ ಮ್ಯೂಸಿಕ್ ಸಖತ್ ಕ್ಲಿಕ್ ಆಗಿದೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಿದೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿರೋ ಪ್ರಜ್ವಲ್ ಗೆ ಈ ಸಿನಿಮಾ ಲೈಫ್ ಕೊಡೋದ್ರಲ್ಲಿ ಡೌಟೇ ಇಲ್ಲ ಅಂತ ಗಾಂಧಿನಗರ ಮಾತನಾಡಿಕೊಳ್ತಿದೆ.

Share this Story:

Follow Webdunia kannada