Select Your Language

Notifications

webdunia
webdunia
webdunia
webdunia

ಪ್ರಸ್ತುತ ಗೇಮ್‌ಗೆ ಸಿದ್ಧರಾಗಿದ್ದಾರೆ ನಟ ಅರ್ಜುನ್ ಸರ್ಜಾ

ಪ್ರಸ್ತುತ ಗೇಮ್‌ಗೆ ಸಿದ್ಧರಾಗಿದ್ದಾರೆ ನಟ ಅರ್ಜುನ್ ಸರ್ಜಾ
, ಶನಿವಾರ, 31 ಜನವರಿ 2015 (09:48 IST)
ಇತ್ತೀಚೆಗಷ್ಟೇ ಅರ್ಜುನ್ ಸರ್ಜಾ ಅವರ ಅಭಿನಯದ ಚಿತ್ರ ಅಭಿಮನ್ಯು ಬಿಡುಗಡೆ ಆಯ್ತು. ಕನ್ನಡ ಜನತೆ ಆ ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿದರು. ಅದು  ಕನ್ನಡ, ತಮಿಳು ಮತ್ತೆ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಯ್ತು. ಅದಾದ ಬಳಿಕ ಮತ್ತೊಮ್ಮೆ ಅರ್ಜುನ್ ಎರಡು ಭಾಷೆಯಲ್ಲಿ ಬಿಡುಗಡೆ ಆಗುವ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ಸಿದ್ಧತೆ ನಡಿಸಿದ್ದಾರೆ, ಅದನ್ನು ಎಎಂಆರ್ ರಮೇಶ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಹಾಗೂ ಶಾಮ್ ನಟಿಸುತ್ತಿದ್ದು. ಇದನ್ನು ಗೇಂ ಅನ್ನುವ ಹೆಸರಲ್ಲಿ ತಯಾರಿಸುತ್ತಿದ್ದಾರೆ.

ಈ ಇಬ್ಬರೂ ಕಲಾವಿದರು ಕನ್ನಡಿಗರು. ಆದರೆ ಅವರು ಅಧಿಕ ಜನಪ್ರಿಯತೆಯನ್ನು ಗಳಿಸಿರುವುದು ತಮಿಳಿನಲ್ಲಿ. ಆದ ಕಾರಣರ ಎರಡು ಭಾಷೆಗಳಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಹೇಳಿದ್ದಾರೆ. ಅನೇಕ ನೈಜ ಕಥೆಗಳನ್ನು ತೆರೆಗೆ ತಂದಿರುವ ರಮೇಶ್ ಅವರು ಈ ಕಥೆಯು ನೈಜ ಬದುಕಿಗೆ ಸಂಬಂಧಪಟ್ಟಿರುವುದಾಗಿದೆ ಎಂದು ಹೇಳಿದ್ದಾರೆ. ಇದು ಒಂದು ಘಟನೆಯ ಸುತ್ತ ನಡೆಯುವ   ಕಥನವಾಗಿದ್ದು, ಅನೇಕ ಕೊಲೆಗಳು, ರಹಸ್ಯಗಳು ಇರುತ್ತವೆ.

ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವು ಪ್ರಾಮುಖ್ಯತೆ ಗಳಿಸಿರುವ ಕಾರಣದಿಂದ   ಇದಕ್ಕೆ ಗೇಂ ಎನ್ನುವ ಹೆಸರನ್ನು ಇಡಲಾಗಿದೆ ಎಂದು ಈ ಸಮಯದಲ್ಲಿ ಹೇಳಿದ್ದಾರೆ.ಸಂದೀಪ್ ಚೌಟ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.

Share this Story:

Follow Webdunia kannada