Webdunia - Bharat's app for daily news and videos

Install App

ಕುಡಿಯುವುದನ್ನು ಬಿಟ್ಟಿದ್ದೇನೆ ಎಂದ ಖ್ಯಾತ ನಿರ್ದೇಶಕ

Webdunia
ಶುಕ್ರವಾರ, 27 ಜನವರಿ 2017 (10:09 IST)
ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಕಳೆದ ಮೂರು ವರ್ಷಗಳಿಂದ ಯಾವುದೇ ಬಹುರಾಷ್ಟ್ರೀಯ ಕಂಪೆನಿಗಳ ಶೀತಲ ಪಾನೀಯ ಕುಡಿಯುವುದನ್ನು ಬಿಟ್ಟುಬಿಟ್ಟಿದ್ದಾರಂತೆ. ಈ ವಿಷಯವನ್ನು ಸ್ವತಃ ಅವರೇ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
 
ಮುರುಗಾಸ್ ನಿರ್ದೇಶನದಲ್ಲಿ ’ಕತ್ತಿ’ ಚಿತ್ರ  ಬಂದಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ಶೀತಲ ಪಾನೀಯಗಳ ತಯಾರಿಯಿಂದ ಗ್ರಾಮಗಳಲ್ಲಿನ ನೀರಿನ ಸಂಪನ್ಮೂಲ ಕಲುಷಿತವಾಗುತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ದರು. ಕೇವಲ ಕಮರ್ಷಿಯಲ್ ಹಿಟ್‌ಗಾಗಿ ಅಲ್ಲದೆ ಈ ಚಿತ್ರದ ಮೂಲಕ ಆಚರಣೆಗೂ ಮುಂದಾದರು. ಕಥೆ ಬರೆಯುವ ಸಂದರ್ಭದಲ್ಲೇ ಶೀತಲ ಪಾನೀಯ ಕುಡಿಯುವುದನ್ನು ಬಿಟ್ಟುಬಿಟ್ಟರಂತೆ.
 
ಮೂರು ವರ್ಷಗಳ ಹಿಂದೆ ಕತ್ತಿ ಸಿನಿಮಾ ಕಥೆ ಬರೆಯುತ್ತಿರಬೇಕಾದರೆ ಇದನ್ನು ಕುಡಿಯುವುದನ್ನು ಬಿಟ್ಟೆ. ಈಗ ನನ್ನ ಶೂಟಿಂಗ್ ಸ್ಪಾಟ್‌ನಲ್ಲೂ ನಿಷೇಧಿಸಿದ್ದೇನೆ ಎಂದು ಮುರುಗದಾಸ್ ತಿಳಿಸಿದ್ದಾರೆ. ಸದ್ಯಕ್ಕೆ ಮಹೇಶ್ ಬಾಬು ಅಭಿನಯಿಸುತ್ತಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮುರುಗದಾಸ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಆರೋಪ: ಸತ್ಯ ಹೊರಬರಲಿ ಎಂದ ನಟಿ ರಮ್ಯಾ, ನಟ ರಾಕೇಶ್ ಅಡಿಗ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ಮುಂದಿನ ಸುದ್ದಿ
Show comments