Select Your Language

Notifications

webdunia
webdunia
webdunia
webdunia

ಅನುಷ್ಕ ಶೆಟ್ಟಿಗೆ ಲಿಂಗಾದಿಂದ ಐದು ಕೋಟಿ ನಷ್ಟ ?

ಅನುಷ್ಕ ಶೆಟ್ಟಿಗೆ  ಲಿಂಗಾದಿಂದ ಐದು ಕೋಟಿ ನಷ್ಟ   ?
, ಸೋಮವಾರ, 12 ಜನವರಿ 2015 (10:23 IST)
ದಕ್ಷಿಣ ಭಾರತದ ಶರವೇಗದಲ್ಲಿ  ನಟಿಸುತ್ತಾ ನಟಿ ಮಣಿಯರನ್ನು ಹಿಂದಿಕ್ಕುವಂತಹ ಕೆಲಸ  ಮಾಡುತ್ತಿದ್ದಾಳೆ ಕನ್ನಡದ ಹುಡುಗಿ ಅನುಷ್ಕ ಶೆಟ್ಟಿ. ಆಕೆಯ ಅತಿವೇಗ ಒಳ್ಳೆಯದಲ್ಲ ಎಂದು ಅಭಿಮಾನಿಗಳು ನಿಯಂತ್ರಣ ಮಾಡಿದ್ದಾರೆ ಲಿಂಗಾ ಚಿತ್ರ ಸೋಲಿಸುವುದರ ಮೂಲಕ.
ಈಗ ಹೇಳಲು ಹೊರಟಿರುವ ಸಂಗತಿ ಏನೆಂದರೆ ನಟಿ ಅನುಷ್ಕಾಗೆ ಸುಮಾರು ಐದು  ಕೋಟಿಗಳಷ್ಟು ಮೊತ್ತ ನಷ್ಟವಾಗಿದೆ. ಅದಕ್ಕೆ ಕಾರಣ ಏನು ಎನ್ನುವುದನ್ನು ನಿಮಗೆ ಹೇಳುವ ಮುನ್ನ ಮತ್ತೊಂದು ಸಂಗತಿ ಬಗ್ಗೆ ತಿಳಿಸ ಬೇಕಿದೆ. ಈಗಾಗಲೇ ಲಿಂಗಾ, ರುದ್ರಮದೇವಿ, ಬಾಹುಬಲಿ ಚಿತ್ರಗಳಲ್ಲಿ ನಟಿಸಿರುವ  ಅನುಷ್ಕ ಚಿತ್ರಗಳ ನಿರ್ಮಾಣಕ್ಕೆಂದು ಮಾಡಿರುವ ಮೊತ್ತ ಬರೋಬ್ಬರಿ 300 ಕೋಟಿ ರೂಪಾಯಿಗಳು. 
 
ಆದರೆ ಲಿಂಗ ಚಿತ್ರ ಸೋತು ಆಕೆಯ ತಾರ ಬದುಕಿನ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡಿದೆ. ಹೇಗೆಂದರೆ, ಕಾಲಿವುಡ್ ನಲ್ಲಿ ಅನುಷ್ಕ  ಲಿಂಗ ಚಿತ್ರದಲ್ಲಿ ನಟಿಸುವಾಗ, ಅದರ ಜೊತೆಗೆ ಆಕೆಗೆ ಅನೇಕ ತಮಿಳು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ತು. ಸೂರ್ಯ, ವಿಜಯ್, ಕಾರ್ತಿ, ವಿಶಾಲ್ ಚಿತ್ರಗಳಲ್ಲಿ ಆಕೆಗೆ ನಟಿಸುವ ಅವಕಾಶ ದೊರಕಿತ್ತು. ಆದರೆ ಯಾವಾಗ ಲಿಂಗ ಸೋತು ಹೋಯ್ತೋ ಆಗ ಆ ಚಿತ್ರದ ಸೋಲಿನ ಜೊತೆ ಈಕೆಗೆ ದೊರೆತ ಅವಕಾಶಗಳು ಸಹಿತ ಕೈ ತಪ್ಪಿ ಹೋಯ್ತು. ಇದರಿಂದ ಸುಮಾರು ಐದು ಕೋಟಿ ರೂಪಾಯಿಗಳಷ್ಟು ಮೊತ್ತದ ಹಣವು ಈಗ ನಷ್ಟವಾಗಿದೆ ಆಕೆಗೆ. ಚಿತ್ರರಂಗ ಒಂದು ಜೂಜು ಅನ್ನೋದು ಮತ್ತೇ ಸಾಬೀತು ಮಾಡಿದೆ. ಈಗ ಆಕೆ ಕೈಲಿ ರುದ್ರಮದೇವಿ, ಬಾಹುಬಲಿ ಮತ್ತು ಅಜಿತ್ ಜೊತೆ ನಟಿಸಿರುವ ಚಿತ್ರಗಳು ಮಾತ್ರ ಇದೆ. 

Share this Story:

Follow Webdunia kannada