Select Your Language

Notifications

webdunia
webdunia
webdunia
webdunia

ಸಸ್ಯಹಾರಿಯಾದ ನಟಿ ಅನುಷ್ಕಾ ಶರ್ಮಾ

ಸಸ್ಯಹಾರಿಯಾದ ನಟಿ ಅನುಷ್ಕಾ ಶರ್ಮಾ
, ಶನಿವಾರ, 1 ಆಗಸ್ಟ್ 2015 (10:38 IST)
ದಿಲ್ ದಡಕನೇ ದೋ ಚೆಲುವೆ ನಟಿ ಅನುಷ್ಕಾ ಶರ್ಮಾ ಮಾಂಸಹಾರಕ್ಕೆ ಟಾಟಾ ಹೇಳಿ ಪಕ್ಕಾ ವೆಜಿಟೇರಿಯನ್ ಆಗಿದ್ದಾರಂತೆ. ಕೆಲ ತಿಂಗಳುಗಳ ಹಿಂದೆ ಅನುಷ್ಕಾ ಶರ್ಮಾ ಮಾಂಸಹಾರವನ್ನು ತ್ಯಜಿಸಿದ್ದಾರಂತೆ.
ಇನ್ನು ತಾವು ಪಕ್ಕಾ ಸಸ್ಯಾಹಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅನುಷ್ಕಾ ನಾನು ಈಗ ಮೊದಲಿಗಿಂತ ಹೆಚ್ಚಾಗಿ ಸಸ್ಯಾಹಾರವನ್ನು ಸೇವಿಸುತ್ತಿದ್ದೇನೆ. ಸಂಪೂರ್ಣ ಸಸ್ಯಹಾರಿಯಾಗಿರುವುದರಿಂದ  ನನ್ನ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲ್ಲದೇ ನನಗೆ ಸಖತ್ ಖುಷಿ ನೀಡುತ್ತಿದೆ ಅಂತಾ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಕೂದಲು ಹಾಗೂ ಆರೋಗ್ಯಕ್ಕೆ ಸಸ್ಯಹಾರ ತುಂಬಾನೇ ಇಂಪಾರ್ಟೆಂಟ್ ಅಂತಾ ಅನುಷ್ಕಾ ಹೇಳಿದ್ದಾರೆ.
 
ಅಂದ್ಹಾಗೆ ಅನುಷ್ಕಾ ಶರ್ಮಾ ಪಕ್ಕಾ ಸಸ್ಯಹಾರಿಯಾಗಿರೋದರ ಹಿಂದೆ ವಿರಾಟ್ ಕೊಹ್ಲಿ  ಉಪದೇಶವಿದೆ ಅನ್ನೋ ಮಾತುಗಳು ಕೂಡ ಬಾಲಿವುಡ್ ಅಂಗಳದಲ್ಲಿ ಪಿಸುಗುಡುತ್ತಿದೆ. ವಿರಾಟ್ ಕೊಹ್ಲಿಕೋಸ್ಕರ ಅನುಷ್ಕಾ ಶರ್ಮಾ ಸಸ್ಯಹಾರಿಯಾಗಿದ್ದಾರೆ ಅಂತಾ ಹೇಳಲಾಗ್ತಿದೆ. ಅದೇ ಏನೇ ಇರಲಿ ವಿರಾಟ್ ಕೊಹ್ಲಿಗೋ ಇಲ್ಲಾ ತಮಗಾಗಿಯೋ ಗೊತ್ತಿಲ್ಲ. ಆದ್ರೆ ಅನುಷ್ಕಾ ಶರ್ಮಾ ಮಾತ್ರ ಸದ್ಯ ವೆಜೆಟೇರಿಯನ್ ಆಗಿರೋದು ಮಾತ್ರ ಸತ್ಯ.

Share this Story:

Follow Webdunia kannada