Webdunia - Bharat's app for daily news and videos

Install App

ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿ ಕೈಹಿಡಿಯಲಿರುವ ಅನುಷ್ಕಾ ಶೆಟ್ಟಿ

Webdunia
ಗುರುವಾರ, 1 ಡಿಸೆಂಬರ್ 2016 (07:14 IST)
ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿಗೆ ಕಡೆಗೂ ಕಂಕಣಭಾಗ್ಯ ಕೂಡಿಬಂದಿದೆ. ಆಗ ಮದುವೆ ಆಗ್ತಾರೆ ಈಗ ಮದುವೆ ಅನ್ನೋ ಸುದ್ದಿಗಳು ಆಗಿದ್ದಾಗ್ಗೆ ಕೇಳಿಬರುತ್ತಲೇ ಇದ್ದವು. ಈಗ ಅವರ ಮದುವೆಗೆ ಸಮಯ ಕೂಡಿಬಂದಿದೆ. ಈಗಾಗಲೆ ಅನುಷ್ಕಾ ಶೆಟ್ಟಿ ಪೋಷಕರು ವರನನ್ನು ಹುಡುಕಿಯಾಗಿದೆಯಂತೆ.
 
ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರೆ ಅನುಷ್ಕಾ ಎನ್ನುತ್ತವೆ ಮೂಲಗಳು. ಈ ಉದ್ಯಮಿ ಅನುಷ್ಕಾ ಶೆಟ್ಟಿ ಕುಟುಂಬಕ್ಕೆ ತುಂಬಾ ಹತ್ತಿರದ ಸಂಬಂಧಿಯಂತೆ. ಬಹುಶಃ ಮುಂದಿನ ವರ್ಷ ಸಪ್ತಪದಿ ತುಳಿಯೋದು ಗ್ಯಾರಂಟಿ ಅಂತೆ ಅನುಷ್ಕಾ.
 
ಸದ್ಯಕ್ಕೆ ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನ ಮುಗಿಸಿಕೊಂಡು ಗಂಡನ ಜೊತೆಗೆ ಹಾಯಾಗಿಬೇಕೆಂದು ಬಯಸಿದ್ದಾರಂತೆ. ಸದ್ಯಕ್ಕೆ ಬಾಹುಬಲಿ 2 ಚಿತ್ರದಲ್ಲಿ ಅನುಷ್ಕಾ ಅಭಿನಯಿಸುತ್ತಿರುವುದು ಗೊತ್ತಿರುವ ಸಂಗತಿ. ಇದರ ಜೊತೆಗೆ ಸೂರ್ಯ ಜೊತೆಗೆ ಸಿಂಗಂ 3 ಚಿತ್ರದಲ್ಲೂ ಅಭಿನಯಿಸಿದ್ದು ಆ ಚಿತ್ರ ಡಿಸೆಂಬರ್ 16ಕ್ಕೆ ತೆರೆಕಾಣುತ್ತಿದೆ. 
 
ಈ ಹಿಂದೆ ಅನುಷ್ಕಾ ಮದುವೆಯಾಗಲಿರುವ ಸುದ್ದಿಯೂ ಹೊರಬಿದ್ದಿದ್ದು. ವಯಸ್ಸಾದ ನಿರ್ಮಾಪಕರೊಬ್ಬರ ಜೊತೆ ಸಂಬಂಧ ಕಲ್ಪಿಸಲಾಗಿತ್ತು. ಆಮೇಲೆ ಆ ಸುದ್ದಿ ಠುಸ್ ಆಯಿತು. ಈಗ ತಂದೆತಾಯಿ ನೋಡಿರುವ ಹುಡುಗನ ಕೈಹಿಡಿಯಲಿದ್ದಾರೆ ಎಂಬುದು ಲೇಟೆಸ್ಟ್ ನ್ಯೂಸ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ಮುಂದಿನ ಸುದ್ದಿ
Show comments