Select Your Language

Notifications

webdunia
webdunia
webdunia
webdunia

ಒಂದೇ ತಿಂಗಳಲ್ಲಿ ಎರಡು ಅವತರಾದಲ್ಲಿ ಬರುತ್ತಿದ್ದಾರೆ ಅನುಷ್ಕಾ ಶೆಟ್ಟಿ ?!

ಒಂದೇ ತಿಂಗಳಲ್ಲಿ ಎರಡು ಅವತರಾದಲ್ಲಿ ಬರುತ್ತಿದ್ದಾರೆ ಅನುಷ್ಕಾ ಶೆಟ್ಟಿ ?!
, ಗುರುವಾರ, 3 ಸೆಪ್ಟಂಬರ್ 2015 (09:29 IST)
ಸದ್ಯ ಬಾಹುಬಲಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವಾಗಲೇ ಅನುಷ್ಕಾ ಅವರ ಎರಡು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಆದ್ರೆ ಈ ಎರಡೂ ಸಿನಿಮಾಗಳು ಅನುಷ್ಕಾ ಅಭಿಮಾನಿಗಳಿಗೆ ಎರಡು ವಿಭಿನ್ನ ಅನುಭವಗಳನ್ನು ಕೊಡೋದು ಪಕ್ಕಾ ಆಗಿದೆ.
ರುದ್ರಮ್ಮದೇವಿ. ಈ ಸಿನಿಮಾದಲ್ಲಿ ಅನುಷ್ಕಾಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಣಿ ರುದ್ರಮ್ಮ ದೇವಿಯಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಪ್ರಾಂತ್ಯದ ಜನರಿಗಾಗಿ ಹೋರಾಡುವ ದಿಟ್ಟ ಮಹಿಳೆಯಾಗಿ ಮಿಂಚಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಅನುಷ್ಕಾ  ಹೊಸ ಅವತಾರ ನೋಡೋದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
 
ಮತ್ತೊಂದು ಕಡೆ ಅನುಷ್ಕಾ ಅಭಿನಯದ ಮತ್ತೊಂದು ಸಿನಿಮಾ ಸೈಜ್ ಝಿರೋ ಕೂಡ ಈ ತಿಂಗಳು ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ನೀವು ಅನುಷ್ಕಾಳನ್ನು ಊಹಿಸಿಕೊಳ್ಳದ ಪಾತ್ರದಲ್ಲಿ ನೋಡಬಹುದು. ಸಿನಿಮಾದಲ್ಲಿ ಸೌಂದರ್ಯಕ್ಕೆ ಝಿರೋ ಸೈಜ್ ಮುಖ್ಯವಲ್ಲ ಅಂತಾ ಅನುಷ್ಕಾ ಹೇಳೋಕೆ ಹೊರಟಿದ್ದಾರೆ. ಗಜಗಾಮಿನಿಯಾಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅನುಷ್ಕಾಳ ಎರಡೂ ವಿಭಿನ್ನ ಪಾತ್ರಗಳನ್ನು ಒಂದೇ ತಿಂಗಳಲ್ಲಿ ನೋಡೋ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

Share this Story:

Follow Webdunia kannada