Select Your Language

Notifications

webdunia
webdunia
webdunia
webdunia

ಅನುಷ್ಕಾ ವಿವಾಹಕ್ಕೆ ಗ್ರೀನ್ ಸಿಗ್ನಲ್: ವರ ಯಾರು ಗೊತ್ತಾ?

ಅನುಷ್ಕಾ ವಿವಾಹಕ್ಕೆ ಗ್ರೀನ್ ಸಿಗ್ನಲ್: ವರ ಯಾರು ಗೊತ್ತಾ?
ಹೈದ್ರಾಬಾದ್ , ಶನಿವಾರ, 24 ಸೆಪ್ಟಂಬರ್ 2016 (15:27 IST)
ಒಬ್ಬಳು ನಟಿ, ಮತ್ತೊಬ್ಬ ನಟನನ್ನು ವರಿಸುವ ಉದಾಹರಣೆ ಇಲ್ಲಿ ಹತ್ತಾರು. ಹಾಗೆಯೇ ನಿರ್ದೇಶಕನ ಕೈಹಿಡಿದು ಸುಹಾಸಿನಿ ರೀತಿ ಆರಾಮಾಗಿ ಇರುವವರೂ ಕೆಲವರು ಸಿಗುತ್ತಾರೆ. ಹಾಗೆಯೇ ಇಲ್ಲಿ ನಿರ್ಮಾಪಕನ ಕೈಹಿಡಿದು ಸೆಟ್ಲ್ ಆಗುವ ಸುಂದರಿಯರೂ ಕಡಿಮೆಯೇನಿಲ್ಲ. ಈಗ ಸಿನಿ ಇಂಡಸ್ಟ್ರಿಯೊಳಗೆ ಒಂದು ಮದ್ವೆಯ ಗಾಸಿಪ್ ಎದ್ದಿದೆ. ಅದು ಕನ್ನಡತಿ ಅನುಷ್ಕಾ ಶೆಟ್ಟಿ ಬಗ್ಗೆ!
ಟಾಲಿವುಡ್, ಕಾಲಿವುಡ್ ಸಿನೆಮಾ ರಂಗದಲ್ಲಿ ತನ್ನದೇ ಆದ ಹಾಟ್ ಛಾಪು ಮೂಡಿಸಿರುವ ಕನ್ನಡದ ಹೆಮ್ಮೆಯ ಪುತ್ರಿ ಅನುಷ್ಕಾ ಶರ್ಮಾ, ವಿವಾಹವಾಗಲು ಹೊರಟಿದ್ದಾರೆ.   
 
ಚಿತ್ರರಂಗದ ಖ್ಯಾತ ನಾಮ ನಟರೊಂದಿಗೆ ವಿವಾಹವಾಗಲಿದ್ದಾಳೆ ಎನ್ನುವ ಹಾಟ್ ವರದಿಗಳು ದಿನಗಳೆದಂತೆ ಕೂಲ್ ಪಡೆದುಕೊಂಡಿವೆ. ನಾಗಚೈತನ್ಯ, ಪ್ರಭಾಸ್ ಸೇರಿದಂತೆ ಹಲವು ನಟರ ಹೆಸರುಗಳು ಕೇಳಿ ಬಂದಿದ್ದವು.
 
ಇದೀಗ ಟಾಲಿವುಡ್ ಸಿನೆಮಾ ರಂಗದ ಅತಿದೊಡ್ಡ ನಿರ್ಮಾಪಕನೊಂದಿಗೆ ಅನುಷ್ಕಾ ವಿವಾಹವಾಗಲಿದ್ದಾಳೆ ಎನ್ನುವ ವರದಿಗಳು ಹರಿದಾಡುತ್ತಿವೆ.
 
ತೆಲುಗು ಚಿತ್ರರಂಗದ ನಿರ್ಮಾಪಕನೊಂದಿಗೆ ಅನುಷ್ಕಾ ಒಟ್ಟೊಟ್ಟಿಗೆ ತಿರುಗುತ್ತಿರುವ ಸುದ್ದಿಗಳು ಟಾಲಿವುಡ್‌‌ನಲ್ಲಿ ಕೋಲಾಹಲ ಸೃಷ್ಟಿಸುತ್ತಿವೆ. ಆದರೆ, ವಿಚಿತ್ರವೆಂದರೆ, ನಿರ್ಮಾಪಕನಿಗೆ ಈಗಾಗಲೇ ವಿವಾಹವಾಗಿದೆ ಎನ್ನುವ ಸಂಗತಿ ಬಟಾ ಬಯಲಾಗಿದೆ. 
 
ಈಗಾಗಲೇ ವಿವಾಹವಾಗಿರುವ ವ್ಯಕ್ತಿಯೊಂದಿಗೆ ವಿವಾಹವಾಗಲು ಅನುಷ್ಕಾ ಪೋಷಕರು ಸಮ್ಮತಿ ಸೂಚಿಸಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ. ಆದ್ರೆ ಮದುವೆಯಾದ್ರೆ ಆತನನ್ನೇ ಎಂದು ಅನುಷ್ಕಾ ನುಲಿಯುತ್ತಿದ್ದಾಳಂತೆ 
 
34 ವರ್ಷದ ಬೆಡಗಿ ಅನುಷ್ಕಾ ಸದ್ಯ ‘ಬಾಹುಬಲಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮುಗಿದ ಮೇಲೆ ಮದ್ವೆ ದಿನಾಂಕ, ಆ ನಿರ್ಮಾಪಕನ ಹೆಸರು ಬಹಿರಂಗವಾಗುತ್ತದಂತೆ. ಅಲ್ಲಿಯ ತನಕ ನೀವು ಕಾಯಬೇಕಷ್ಟೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ ತಿಂಗಳ ಈ ವಾರದಲ್ಲಿ ನಿಮ್ಮ ಮುಂದೆ ಬಿಗ್ ಬಾಸ್