Webdunia - Bharat's app for daily news and videos

Install App

ಅನುಷ್ಕಾ-ರಣವೀರ್ ಅತ್ಯುತ್ತಮ ಕಲಾವಿದರು: ಪ್ರಿಯಾಂಕಾ

Webdunia
ಬುಧವಾರ, 27 ಮೇ 2015 (10:15 IST)
ಕೆಲವು ಚಿತ್ರಗಳನ್ನು ವೀಕ್ಷಿಸಿದಾಗ ಖುಷಿ ಅನ್ನಿಸುತ್ತದೆ. ದಿಲ್ ದಡಕ್ನೆ ದೋ ಆ ವಿಭಾಗಕ್ಕೆ ಸೇರುವಂತಹದ್ದು ಎನ್ನುವ ಮಾತನ್ನು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಈ ಚಿತ್ರದಲ್ಲಿನ ನಟನೆ ತನಗೆ ಉತ್ತಮವಾದ ಅನುಭವ ನೀಡಿದೆ ಎನ್ನುವ ಮಾತನ್ನು ಪ್ರಿಯಾಂಕಾ ಹೇಳಿದ್ದಾರೆ. ನಾನು ಒಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದೇನೆ ಎಂದರೆ ಸೆಟ್‌ನಲ್ಲಿ ಇರುವ ಎಲ್ಲರ ಜೊತೆ ಸ್ನೇಹದಿಂದ ಇರುವ ಅಭ್ಯಾಸ ಹೊಂದಿದ್ದೇನೆ. ಆ ಸಿನಿಮಾದಲ್ಲಿ ನಾನು ಮತ್ತು ಅನುಷ್ಕ ಶರ್ಮ ಒಟ್ಟಿಗೆ ನಟಿಸಿದ್ದೆವು. 
ಅನುಷ್ಕಾ ಶರ್ಮಾ ಉತ್ತಮ ನಟಿ. ಆಕೆಗೆ ಎಂತಹ ಪಾತ್ರಗಳು ಹೊಂದುತ್ತದೆ ಎನ್ನುವ ಸಂಗತಿಯ ಬಗ್ಗೆ ಸ್ಪಷ್ಟವಾದ ಅರಿವಿದೆ. ಅನುಷ್ಕಾಳಿಂದ  ದಿಲ್ ದಡಕ್ನೆ ದೋ ಚಿತ್ರಕ್ಕೆ ಮತ್ತಷ್ಟು ಸೌಂದರ್ಯ ಸಿಕ್ಕಿದೆ. ಈ ಸಿನಿಮಾದಲ್ಲಿ ಆಕೆಯ ಪಾತ್ರ ಬಹಳ ಮುಖ್ಯವಾಗಿದೆ. ನನ್ನ ಮತ್ತು ಅನುಷ್ಕ ಅಭಿನಯದಲ್ಲಿ ಒಂದು ಹಾಡನ್ನು ಚಿತ್ರೀಕರಣ ಮಾಡಲಾಯಿತು.ನಿರ್ದೇಶಕ ಜೋಯಾ ಅಖ್ತರ್ ಆ ಹಾಡನ್ನು ನಿರ್ದೇಶನ ಮಾಡಿದರು. ಆ ಹಾಡು ಚಿತ್ರೀಕರಣ ಮಾಡುವಾಗ ಸಾಕಷ್ಟು ಎಂಜಾಯ್ ಮಾಡಿದ್ದೇವೆ.  
 
ಒಬ್ಬರ ಜೊತೆ ಒಬ್ಬರು ಸ್ಪರ್ಧೆಗಿಳಿದಂತೆ ಶಾಟ್ ಗ್ಯಾಪ್ ನಡುವೆ ಗೇಮ್ಸ್ ಆಡುತ್ತ ಇರುತ್ತಿದ್ದೆವು ಅನುಷ್ಕಾ ಮತ್ತು ನಾನು ಸೇರಿದರೆ ತರಲೆ ಇದ್ದದ್ದೇ. ಅಲ್ಲದೆ ಮಾತಾಡುತ್ತಾ ಕಾಲ ಕಳೆಯುತ್ತಿದ್ದೆವು. ರಣವೀರ್ ಸಿಂಗ್ ಬಗ್ಗೆ ಹೇಳುವುದಾದರೆ ಆತ ಉತ್ತಮ ನಟ. ಅದೇ ರೀತಿ ತುಂಬಾ ಖುಷಿಯಾಗಿರುವ ಸರಳ ವ್ಯಕ್ತಿ. ರಣವೀರ್ ಸೆಟ್‌ನಲ್ಲಿ ಇದ್ದರೆಂದರೆ ನಗುವಿಗೇನೂ ಕೊರತೆ ಇರದು ಆತನ ಜೊತೆ ಸಿನಿಮಾ ಮಾಡೋದು ಎಂದರೆ ಸಖತ್ ಖುಷಿಯಾಗುತ್ತದೆ ಎಂದಿದ್ದಾರೆ ಪ್ರಿಯಾಂಕಾ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments