Select Your Language

Notifications

webdunia
webdunia
webdunia
webdunia

ಸಹಜೀವನದತ್ತ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ

ಸಹಜೀವನದತ್ತ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ
, ಶನಿವಾರ, 20 ಡಿಸೆಂಬರ್ 2014 (14:46 IST)
ಇತ್ತೀಚಿಗೆ ಸಹಜೀವನದ ಬಗ್ಗೆ ಹೆಚ್ಚು ಒಟ್ಟು ಕೊಡುತ್ತಿದ್ದಾರೆ ಬಾಲಿವುಡ್ ಚಿತ್ರರಂಗದವರು. ಮದುವೆ ಆದ ಬಳಿಕ ಒಟ್ಟಾಗಿ ಇರುವುದಕ್ಕಿಂತಲೂ ಮದುವೆಗೆ ಮುನವೇ ಒಟ್ಟಿಗಿದ್ದು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಪಟ್ಟಿಯಲ್ಲಿ ಇತ್ತೀಚೆಗೆ ಸೇರ್ಪಡೆಯಾದ ಜೋಡಿ ಕತ್ರಿನ ಕೈಫ್ ಮತ್ತು ರಣಬೀರ್ ಕಪೂರ್. 
ಈಗ ಆ ಪಟ್ಟಿಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕ ಶರ್ಮ ಸಹ ಸೇರ್ಪಡೆ ಆಗುತ್ತಿದ್ದಾರೆ. ಈ ಸೆಲೆಬ್ರಿಟಿ ಜೋಡಿ ಈಗಾಗಲೇ ತಮ್ಮ ಪ್ರೀತಿಯಿಂದ ಎಲ್ಲರಿಗೂ ಗೊತ್ತಾಗಿದ್ದಾರೆ. ಈ ಜೋಡಿಯು ಕೇವಲ ಪ್ರೀತಿ ಮಾಡುತ್ತಾ ಕೂರದೆ ಅದನ್ನು ತಮ್ಮ ಪೋಷಕರಿಗೂ ತಿಳಿಸಿ ಮದುವೆಗೆ ಸಮ್ಮತಿ ಪಡೆದಿದ್ದಾರೆ. ಹಾಗಾದ್ರೆ ಹಾಯಾಗಿ ಮದುವೆ ಆಗಬಾರದೇ ಎನ್ನುವ ಪ್ರಶ್ನೆ ನಿಮ್ಮದಾಗಿದ್ದಾರೆ, ಮದುವೆ ಎನ್ನುವುದು ಸದ್ಯಕ್ಕೆ ಬೇಡ, ಇನ್ನು ಸ್ವಲ್ಪಕಾಲ ಪ್ರೀತಿಸ ಬೇಕು ಸಿಕ್ಕಾಪಟ್ಟೆ. ಅದಕ್ಕೆ ಸಹಜೀವನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಈ ಜೋಡಿ. 
 
ಅನುಷ್ಕಾ ತನ್ನ ತಾಯಿ ತಂದೆ ಬಳಿ ಸಮ್ಮತಿ ಮುದ್ರೆ ಪಡೆದಿದ್ದಾಳೆ. ಇಬ್ಬರು ಒಟ್ಟಿಗೆ ಇರಲು ಮುಂಬೈನಲ್ಲಿ ಫ್ಲಾಟ್ ಹುಡುಕುತ್ತಿದ್ದಾರಂತೆ. ಪ್ರಸ್ತುತ ಅನುಷ್ಕ ನೆಲೆಸಿರುವ ಸ್ಥಳದ ಸಮೀಪದಲ್ಲೇ ಹೊಸ ಫ್ಲಾಟ್ ಹುಡುಕಾಟ ನಡೆದಿದೆ. ಮದುವೆಗೆ ಮುನ್ನ ಒಂದಷ್ಟು ವರ್ಷ ಸಹಜೀವನ ನಡೆಸಿದ್ದ ಸೈಫ್ ಮತ್ತು ಕರೀನ ಈಗ ದಂಪತಿಗಳಾಗಿ ತಮ್ಮ ವೈವಾಹಿಕ ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ. ಅದೇರೀತಿ ವಿರಾಟ್-ಅನುಷ್ಕಾ ಬದುಕಲ್ಲೂ ಆಗಲಿ. 

Share this Story:

Follow Webdunia kannada