Select Your Language

Notifications

webdunia
webdunia
webdunia
webdunia

'ಪಾಪು'ವನ್ನು ಹಂಚಿಕೊಳ್ಳಲಿರುವ ಅಮೃತ ವರ್ಷಿಣಿ ಜೋಡಿ

'ಪಾಪು'ವನ್ನು ಹಂಚಿಕೊಳ್ಳಲಿರುವ ಅಮೃತ ವರ್ಷಿಣಿ ಜೋಡಿ
, ಶುಕ್ರವಾರ, 29 ಮೇ 2015 (10:13 IST)
ಮತ್ತೊಮ್ಮೆ ಅಮೃತವರ್ಷಿಣಿ ಜೋಡಿ ತೆರೆಯನ್ನು ಒಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ. ಶರತ್ ಬಾಬು ಮತ್ತು ಸುಹಾಸಿನಿಯವರು ಎಸ್ ಮಹೇಂದರ್ ಅವರ ನಿರ್ದೇಶನದ ಪಾಪು ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಕೃತಿ ಕರಬಂಧ ಮುಖ್ಯಪಾತ್ರಧಾರಿಯಾಗಿರುವ ಈ ಚಿತ್ರದ ಕೆಲವು ಸನ್ನಿವೇಶಗಳನ್ನು ಇಂಡಸ್ ವೆಸ್ಟ್ ಸೈಡ್ ಆಸ್ಪತ್ರೆಯಲ್ಲಿ ಚಿತ್ರೀಕರಿಸಿ ಕೊಳ್ಳಲಾಯಿತು. 
ಈ ಚಿತ್ರದಲ್ಲಿ ಶರತ್ ಬಾಬು ಕೃತಿ ತಂದೆ ಪಾತ್ರಧಾರಿಯಾಗಿದ್ದಾರೆ. ಅವರು ಚಿತ್ರದಲ್ಲಿ  ಡಾಕ್ಟರ್  ಆಗಿರುವ ನಟಿ ಸುಹಾಸಿನಿ ಅವರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸುವ ಸನ್ನಿವೇಶವನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಸ್ ಮಹೇಂದರ್.  
 
ಮಹಾಕಾಳಿ ಚಿತ್ರದ ನಂತರ ಮಹೇಂದರ್ ಅವರು ಈಗ ಪಾಪು ಚಿತ್ರದ ಕಡೆಗೆ ತಮ್ಮ ಚಿತ್ತ ನೆಟ್ಟಿದ್ದಾರೆ. ಈ ಚಿತ್ರ ಬಿಜಿಎಸ್  ಗ್ಲೋಬಲ್ ವಿಲೇಜ್ ನಲ್ಲಿ ನಡೆಯುತ್ತಿದೆ. ಇದನ್ನು ಗಂಗಹನುಮಯ್ಯ ಬಿಪಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರು ತಮ್ಮ ಚಿತ್ರದ ಚಿತ್ರೀಕರಣ  ಗ್ಲೋಬಲ್ ವಿಲೇಜ್ ನಲ್ಲಿ ನಡೆಸಲು ಅನುಮತಿ ಪಡೆದ ಕಾರಣ ವಿಶೇಷವಾಗಿ ಈ ಚಿತ್ರದ ಚಿತ್ರೀಕರಣ ಅಲ್ಲಿ ನಡೆಯುತ್ತಿದೆ. 
 
ಶ್ರೀನಗರ ಕಿಟ್ಟಿ, ರಂಗಾಯಣ ರಘು , ವೀಣಾ ಸುಂದರ್, ಪವನ್  ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಅಭಿನಯದ ಅನೇಕ ಸನ್ನಿವೇಶಗಳನ್ನು ನಾಗರಬಾವಿಯಲ್ಲಿ ಚಿತ್ರೀಕರಣ ಮಾಡಲಾಯಿತು. ಈ  ಚಿತ್ರದ ನಿರ್ದೇಶನದಲ್ಲಿ ಡಿಫರೆಂಟ್ ಡ್ಯಾನಿ ಸಹ ಪಾಲುದಾರರಾಗಿದ್ದಾರೆ. 
 
ಈ ಚಿತ್ರಕಥೆ ಎಸ್ ಮಹೇಂದರ್ ಅವರ  ಬದುಕಿನ ಕಥಾ ಹಂದರದ ಎಳೆಯನ್ನು ಹೊಂದಿದೆ ಎಂದು ಗಾಂಧಿನಗರಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಜಗದೀಶ್ ವಾಲಿ ಅವರ ಕ್ಯಾಮರ, ಅರ್ಜುನ್ ಸರ್ಜಾ ಅವರ ಸಂಗೀತ, ಕೆ ಎಂ ಪ್ರಕಾಶ್ ಅವರ ಸಂಕಲನ, ಇಸ್ಮೈಲ್ ಕಲಾ ನಿರ್ದೇಶನ ಮತ್ತು ಮುರಳಿ ಅವರ ಕೊರಿಯಾಗ್ರಫಿಯನ್ನು ಪಾಪು ಚಿತ್ರ ಹೊಂದಿದೆ.   

Share this Story:

Follow Webdunia kannada