ಪ್ರತಿಷ್ಠಾತ್ಮಕ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ರಾಷ್ಟ್ರೀಯ ಪ್ರಶಸ್ತಿ ಬಾಲಿವುಡ್ ನ ಮೆಗಾ ಸ್ಟಾರ್, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಸಂದಿದೆ. ಇದೆ ತಿಂಗಳ 27 ರಂದು ಅವರು ಈ ಪ್ರಶಸ್ತಿ ಪಡೆಯುತ್ತಿದ್ದಾರೆ.
ಈ ವಿಷಯವನ್ನು ಅಕ್ಕಿನೇನಿ ಇಂಟರ್ ನ್ಯಾಷನಲ್ ಫೌಂಡೇಷನ್ ಶನಿವಾರ ಈ ಸಂಗತಿಯನ್ನು ಪ್ರಕಟ ಪಡಿಸಿದೆ. 2013 ಈ ಪ್ರಶಸ್ತಿಯನ್ನು ಅಕ್ಕಿನೇನಿ ಫೌಂಡೆಶೇನ್ ಪ್ರದಾನ ಮಾಡುತ್ತಿದೆ. 2005 ರಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಭಾರತೀಯ ಚಲನಚಿತ್ರರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಮಹನೀಯರಿಗೆ ಅಕ್ಕಿನೇನಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪುರಸ್ಕಾರದಲ್ಲಿ 5 ಲಕ್ಷ ನಗದಿನ ಜೊತೆಗೆ ಪ್ರಶಂಸೆಯ ಪತ್ರವನ್ನು ಸಹಿತ ನೀಡಲಾಗುತ್ತದೆ.
ಈ ಮೊದಲು ಈ ಪ್ರಶಸ್ತಿಗೆ ದೇವಾನಂದ್, ಶಬಾನ ಅಜ್ಮಿ, ಅಂಜಲಿ ದೇವಿ, ಲತಾ ಮಂಗೇಶ್ಕರ್, ವೈಜಂತಿ ಮಾಲ ಬಾಲಿ, ಹೇಮಾ ಮಾಲಿನಿ, ಶ್ಯಾಮ್ ಬೆನಗಲ್ ಇನ್ನು ಅನೇಕರು ಭಾಜನರಾಗಿದ್ದಾರೆ. ಈಗ ಆ ಹೆಮ್ಮೆಯ ಪ್ರಶಸ್ತಿ ಬಿಗ್ ಬಿಯವರ ಸಾಧನೆಯ ಕಿರೀಟದ ಮಾಣಿಕ್ಯವಾಗಲಿದೆ.